ಮಂಗಳೂರು: ಕರಾವಳಿಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿತಟದ ಭೂಮಿ ಜಲಾವೃತವಾಗಿದೆ. ಕೃಷಿ ಭೂಮಿಗೂ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮಂಗಳೂರು ಹೊರವಲಯದ ಅದ್ಯಪಾಡಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಅದೇ ರೀತಿ ಮುಗೇರ ಕುದ್ರು ಪ್ರದೇಶ ಸಂಪೂರ್ಣ ಜಲಾವೃತವಾಗಿದೆ.
ದೋಣಿಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಮುಗೇರಕುದ್ರು ಪ್ರದೇಶಕ್ಕೆ ಫಲ್ಗುಣಿ ನದಿ ನೀರು ನುಗ್ಗಿದ್ದು, ಈ ಪ್ರದೇಶದ 30 ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಮರವೂರು ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಬಿಗಡಾಯಿಸಿದ ಪರಿಸ್ಥಿತಿ ಪ್ರತಿವರ್ಷವೂ ಭೂ ಪ್ರದೇಶ ಜಲಾವೃತವಾಗುವ ಪ್ರಕರಣಗಳು ನಡೆಯುತ್ತಿವೆ.