ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜೆ ಮಾಡಿದೆ.
ಮಂಗಳೂರಿನ ಮಹಿಳಾ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಮತ್ತು ಮಂಗಳೂರಿನ ಜೆಎಂಎಫ್ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಆರೋಪಿ ವಕೀಲ ಕೆಎಸ್ಎನ್ ರಾಜೇಶ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಸಿಸಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಸಂತ್ರಸ್ತ ವಿದ್ಯಾರ್ಥಿನಿ ಮತ್ತು ದೂರುದಾರರ ಅಹವಾಲು ಆಲಿಸಿದ ಬಳಿಕ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಕಾನೂನು ವಿದ್ಯಾರ್ಥಿನಿಯೊಬ್ಬಳು ಕಲಿಯುವುದಕ್ಕಾಗಿ ವಕೀಲರ ಕಚೇರಿಗೆ ಬಂದಿದ್ದಾಗ ಈ ರೀತಿಯ ಘಟನೆ ಆಗಿರುವುದು ಆಕೆಯ ವೃತ್ತಿ ಮತ್ತು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಲ್ಲಿ ಆರೋಪಿ ವಕೀಲ ಗುರುವಿನ ಸ್ಥಾನದಲ್ಲಿರುತ್ತಾನೆ. ನಂಬಿಕೆಯಿಟ್ಟು ವಿದ್ಯಾರ್ಥಿನಿ ಆತನ ಬಳಿ ಕಲಿಯಲು ಬರುತ್ತಾಳೆ. ಇಂತಹ ಸಮಯದಲ್ಲಿ ಇಡೀ ಪ್ರಕರಣವನ್ನು ರದ್ದುಗೊಳಿಸುವುದು ಈ ರೀತಿಯ ದುಷ್ಕೃತ್ಯಗಳನ್ನು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
2021ರ ಆಗಸ್ಟ್ ತಿಂಗಳಲ್ಲಿ ವಕೀಲ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು, ತನ್ನ ವಿರುದ್ಧ ದಾಖಲಾದ ಸೆಕ್ಷನ್ ವಿಚಾರದಲ್ಲಿ ವಕೀಲರು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಆ ಜಾಗದಲ್ಲಿ ಆ ರೀತಿಯ ಘಟನೆ ನಡೆದಿಲ್ಲ. ಅದಕ್ಕೆ ಸಿಸಿಟಿವಿಯದ್ದೇ ಸಾಕ್ಷ್ಯ ಇದೆ. ಹಾಗಿದ್ದರೂ, ಸೆಕ್ಷನ್ 376- 2 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು ಎಂದು ವಾದಿಸಿದ್ದರು.