Site icon newsroomkannada.com

ಮತ್ತೆ ಆಸ್ಪತ್ರೆಗೆ ದಾಖಲಾದ ನಟಿ ಸಮಂತಾ

Actress Samantha hospitalised again

ನಟಿ ಸಮಂತಾ ರುತ್​ ಪ್ರಭು ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ಫೋಟೋ ವೈರಲ್​ ಆಗಿದೆ. ನಟಿ ಸದ್ಯ ಆರೋಗ್ಯ ಸರಿಯಿಲ್ಲದ ಕಾರಣಕ್ಕಾಗಿ ಸಿನಿಮಾ ಕೆಲಸಗಳಿಂದ ದೀರ್ಘ ಬ್ರೇಕ್​ ಪಡೆದುಕೊಂಡಿದ್ದಾರೆ.

ಸಮಂತಾ ರುತ್​ ಪ್ರಭು ಅವರು ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಸ್ವತಃ ಅವರೇ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎದುರಾದ ಆರೋಗ್ಯದ ಸಮಸ್ಯೆಗೆ ಯಾವೆಲ್ಲ ರೀತಿಯ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಮಂತಾ ಅವರಿಗೆ ಮಯೋಸೈಟಿಸ್​ ಕಾಯಿಲೆ ಇದೆ. ಅದಕ್ಕೆ ಅವರು ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್​’ ವೆಬ್​ ಸಿರೀಸ್​ನ ಭಾರತದ ವರ್ಷನ್​ ಶೂಟಿಂಗ್​ ಬಳಿಕ ಸಮಂತಾಗೆ ಆರೋಗ್ಯ ಕೈಕೊಟ್ಟಿತು. ಸದ್ಯಕ್ಕಂತೂ ಸಮಂತಾ ರುತ್​ ಪ್ರಭು ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಈ ಬಾರಿ ಅವರು ಚಿಕಿತ್ಸೆಗಾಗಿ ಹಲವು ತಿಂಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಸಂಪೂರ್ಣ ಗುಣಮುಖರಾಗಿ ಬಂದ ನಂತರವೇ ಅವರು ಹೊಸ ಚಿತ್ರಕ್ಕೆ ಸಹಿ ಮಾಡಲಿದ್ದಾರೆ. ಚಿಕಿತ್ಸೆಯ ನಡುವೆಯೇ ಅವರು ಅನೇಕ ದೇಶಗಳಿಗೆ ತೆರಳುತ್ತಿದ್ದಾರೆ. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಮಾನಸಿಕ ನೆಮ್ಮದಿಯ ಕಡೆಗೂ ಗಮನ ಹರಿಸುತ್ತಿದ್ದಾರೆ.

ಆದಷ್ಟು ಬೇಗ ಸಮಂತಾ ರುತ್​ ಪ್ರಭು ಅವರು ಗುಣಮುಖರಾಗಿ ಬರಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

Exit mobile version