ಕೊಡಗಿನ ಬೆಡಗಿ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಫ್ರೆಜರ್ ಟೌನ್ನ ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿದೆ.
ದಂಪತಿ ಊಟಕ್ಕೆ ಹೋಗಿದ್ದ ವೇಳೆ ಕಿರಿಕ್ ನಡೆದಿದೆ. ಊಟ ಮುಗಿಸಿ ವಾಪಸ್ ಬರುವ ವೇಳೆ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಕೆಲವರು ಕಿರಿಕ್ ಮಾಡಿದ್ದಾರೆ. ಪಾರ್ಕಿಂಗ್ನಿಂದ ಕಾರು ತೆಗೆಯುವಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.
ಪುಂಡರು ಭುವನ್ ಕೊರಳಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಕನ್ನಡದಲ್ಲಿ ಮಾತಾಡ್ತಿದ್ದರಿಂದ ಗಲಾಟೆ ಜೋರು ಮಾಡಿದ್ದಾರೆ. ಬಳಿಕ ಕೆಟ್ಟದಾಗಿ ನಿಂದಿಸಿದ್ದಾರೆಂದು ಹರ್ಷಿಕಾ ಪೂಣಚ್ಚ ಆರೋಪಿಸಿದ್ದಾರೆ.