main logo

ಹಿಮಾಲಯದಲ್ಲಿ ಬೆತ್ತಲೆಯಾಗಿ ಆದಿವಾಸಿಗಳಂತೆ ತಿರುಗಾಟ ನಡೆಸುತ್ತಿರುವ ನಟ ಯಾರುಗೊತ್ತಾ?

ಹಿಮಾಲಯದಲ್ಲಿ ಬೆತ್ತಲೆಯಾಗಿ ಆದಿವಾಸಿಗಳಂತೆ ತಿರುಗಾಟ ನಡೆಸುತ್ತಿರುವ ನಟ ಯಾರುಗೊತ್ತಾ?

ನವದೆಹಲಿ: ಕೆಲವು ನಟರಿಗೆ ಕೆಲವೊಂದು ಖಯಾಲಿಗಳಿರುತ್ತವೆ. ಅಂತಹ ಖಯಾಲಿ ಹೊಂದಿರುವ ನಟರಲ್ಲಿ ಬಾಲಿವುಡ್‌ನ ವಿದ್ಯುತ್ ಜಮ್ವಾಲ್ ಕೂಡ ಒಬ್ಬರು. ಈ ನಟ ಈಗ ಹಿಮಾಲಯದಲ್ಲಿ ಸನ್ಯಾಸಿಯಂತೆ ಮೈ ಮೇಲೆ ಬಟ್ಟೆ ಧರಿಸದೆ ತಿರುಗಾಡುತ್ತಿದ್ದಾರೆ.
ವಿದ್ಯುತ್ ಜಮ್ವಾಲ್ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೂ ಮುನ್ನ ದಕ್ಷಿಣ ಭಾರತದ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ದಳಪತಿ ವಿಜಯ್ ನಟಿಸಿದ ತುಪಾಕಿ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿ ಗಮನ ಸೆಳೆದಿದ್ದರು.

ವಿದ್ಯುತ್ ಜಮ್ವಾಲ್ ಇಂದು (ಡಿಸೆಂಬರ್ 10) 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಿಮಾಲಯದ ತಪ್ಪಲಿನಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಬೆತ್ತಲೆಯಾಗಿಯೇ ಅಡುಗೆ ಹಾಗೂ ಝರಿಯ ನೀರಿನಲ್ಲಿ ಸ್ನಾನ ಮಾಡುವ ಫೋಟೊವನ್ನು ಹಂಚಿಕೊಂಡಿದ್ದಾರೆ. ವಿದ್ಯುತ್ ಡಿಸೆಂಬರ್ 10, 1980 ರಂದು ಜಮ್ಮು – ಕಾಶ್ಮೀರದಲ್ಲಿ ಜನಿಸಿದರು. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಸಂತನಂತೆ ಹಿಮಾಲಯದ ಕಾಡು ಮತ್ತು ನದಿಗಳಲ್ಲಿ ಆದಿವಾಸಿಯಂತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಲ್ಲೇ ಸುಮಾರು 10 ದಿನಗಳ ಕಾಲ ಹೀಗೆ ಜೀವನ ನಡೆಸುವುದಾಗಿ ಹೇಳಿಕೊಂಡಿದ್ದಾರೆ.

My retreat to the Himalayan ranges – “the abode of the divine” started 14 years ago. Before I realised, it became an integral part of my life to spend 7-10 days alone- every year. pic.twitter.com/HRQTYtjk6y

— Vidyut Jammwal (@VidyutJammwal) December 10, 2023

Related Articles

Leave a Reply

Your email address will not be published. Required fields are marked *

error: Content is protected !!