Site icon newsroomkannada.com

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

ಸಕಲೇಶಪುರ: ತಾಲೂಕಿನ ಶಿರಾಡಿ ಘಾಟ್ ವ್ಯಾಪ್ತಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇನ್ನೋವಾ ಹಾಗೂ ಕಂಟೈನರ್ ನಡುವೆ ಢಿಕ್ಕಿ ಸಂಭವಿಸಿ ತಾಯಿ – ಮಗ ಸಾವನ್ನಪ್ಪಿ, ಇತರರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಂಗಳವಾರ(ಮೇ.21 ರಂದು) ನಡೆದಿದೆ.

ಕಾರಿನಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರು ಸಮೀಪದ ಬೊಂಡಲ ಗ್ರಾಮದ ಮೂಲದ ಶಬೀರ್ ಅಹಮ್ಮದ್ ಎಂಬುವರ ಪತ್ನಿ ಶಫಿಯ (48) ಹಾಗೂ ಅವರ ಪುತ್ರ ಶಫೀಕ್ (21)‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರಿನಲ್ಲಿ ಮಕ್ಕಳು ಸೇರಿ 6 ಮಂದಿ ಇದ್ದರು ಎನ್ನಲಾಗಿದ್ದು, ಎಲ್ಲರಿಗೂ ಗಂಭೀರ ಸ್ವರೂಪದ ಗಾಯಗಳಾಗಿದೆ. ಸದ್ಯ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರನಹಳ್ಳಿ ಇಂದ ಸುಮಾರು ಎಂಟು ಕಿಲೋಮೀಟರ್ ದೂರದ ಶಿರಾಡಿ ಘಾಟಿನಲ್ಲಿ ಮಂಗಳವಾರ ಬೆಳಿಗ್ಗೆ 6.30ರ ಸಮಯದಲ್ಲಿ ಸಕಲೇಶಪುರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ಈ ದುರಂತ ಘಟನೆ ಸಂಭವಿಸಿದೆ

Exit mobile version