ಉಳ್ಳಾಲ: ಮಧ್ಯರಾತ್ರಿ ಮನೆಯ ಮೇಲ್ಲಾವಣಿಯ ಹೆಂಚು ಸರಿಸಿ ಒಳನುಗ್ಗಿದ ಗಾಂಜಾ ವ್ಯಸನಿಯೋರ್ವ ಮಂಚದಲ್ಲಿ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ಮಹಿಳೆಗೆ ಲೈಂಗಿಕ ಕೀಟಲೆ ಕೊಟ್ಟಿದ್ದು ಕೂಡಲೇ ಎಚ್ಚೆತ್ತ ಮನೆಮಂದಿಯ ಚೀರಾಟಕ್ಕೆ ಆಗಂತುಕ ಮೊಬೈಲನ್ನೇ ಬಿಟ್ಟೋಡಿದ ಘಟನೆ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಹರೇಕಳ ಗ್ರಾಮದ ಕೊಜಪಾಡಿ ನಿವಾಸಿ ನೌಫಾಲ್(32)ಎಂಬಾತ ಮಹಿಳಿಗೆ ಲೈಂಗಿಕ ಕಿರುಕುಳ ನೀಡಿದ್ದು ಅತ್ಯಾಚಾರ ಯತ್ನ ಆರೋಪದಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಹರೇಕಳದ ರಾಜಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಗಂಡ, ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದಾರೆ, ಗಂಡ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ವೃತ್ತಿಗೆ ತೆರಳಿದ್ದು ಮನೆಯೊಳಗೆ ಸಂತ್ರಸ್ತ ಮಹಿಳೆ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ನೌಫಾಲ್ ಮಂಚದ ಕೆಳಗೆ ಮಲಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಈ ವೇಳೆ ಎಚ್ಚೆತ್ತ ಮಹಿಳೆ ಮತ್ತು ಮಕ್ಕಳು ಜೋರಾಗಿ ಚೀರಾಡಿದ್ದು ಗಲಿಬಿಲಿಗೊಂಡ ನೌಫಲ್ ತನ್ನ ಮೊಬೈಲನ್ನೇ ಬಿಟ್ಟು ಓಡಿದ್ದಾನೆ.