main logo

ಪೇಂಟ್ ಮಿಕ್ಸರ್​ಗೆ ಕೂದಲು ಸಿಲುಕಿ ಮಹಿಳೆ ದಾರುಣ ಸಾವು

ಪೇಂಟ್ ಮಿಕ್ಸರ್​ಗೆ ಕೂದಲು ಸಿಲುಕಿ ಮಹಿಳೆ ದಾರುಣ ಸಾವು

ಬೆಂಗಳೂರು: ಬಣ್ಣ ಬೆರೆಸುವ ಪೇಂಟ್ ಮಿಕ್ಸರ್​ಗೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ. 33 ವರ್ಷದ ಶ್ವೇತಾ ಮೃತ ದುರ್ದೈವಿ. ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ಶ್ವೇತಾ, ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆ ಕೆಲಸ ಮಾಡುತ್ತಿದ್ದರು. ಆದ್ರೆ, ನಿನ್ನೆ ಬಣ್ಣ ಬೆರೆಸುವ ಗ್ರೈಂಡರ್​ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾ ತಲೆ ಕತ್ತರಿಸಿ ಹೋಗಿದೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ.

ಬಣ್ಣ ಗಟ್ಟಿಯಾಗುತ್ತಿದ್ದರಿಂದ ಚೆಕ್ ಮಾಡಲು ಗ್ರೈಂಡರ್​ ಒಳಗೆ ಬಗ್ಗಿದಾಗ ಮಹಿಳೆಯ ಜಡೆ ಸಿಲುಕಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಸಹ ಗ್ರೈಂಡರ್ ಸೌಂಡ್ ಗೆ ಯಾರಿಗೂ ಕೇಳಿಸಿಲ್ಲ. ಮಹಿಳೆ ಗ್ರೈಂಡರ್​ಗೆ ಸಿಲುಕಿ ಮೃತಪಟ್ಟ ಬಳಿಕ ಉಳಿದ ಕೆಲಸಗಾರರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಗ್ರೈಂಡರ್ ಸ್ಪೀಡ್​ಗೆ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ. ಈ ಬಗ್ಗೆ ಪ್ರಕರಣ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪ್ರಸಿದ್ಧ ಬಾಗಲಗುಂಟೆ ಮಾರಮ್ಮನ ಜಾತ್ರೆಯಲ್ಲಿ ವ್ಯಾಪಾರಸ್ಥರ ಮೇಲೆ ಪುಂಡರು ಪುಂಡಾಟ ಮೆರೆದಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನ ಕಿತ್ತುಕೊಂಡು ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗಿದ್ದಾರೆ. ಪುಂಡರ ದೌರ್ಜನ್ಯ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!