main logo

ನಡುರಾತ್ರಿಯಲ್ಲಿ ವಿದ್ಯಾರ್ಥಿಗೆ ಸೆಕ್ಸ್‌ ಮೆಸೇಜ್‌ ಕಳುಹಿಸುವ ಶಿಕ್ಷಕಿ, ಆಕೆಯ ಡಿಮ್ಯಾಂಡ್‌ ಏನು ಗೊತ್ತಾ

ನಡುರಾತ್ರಿಯಲ್ಲಿ ವಿದ್ಯಾರ್ಥಿಗೆ ಸೆಕ್ಸ್‌ ಮೆಸೇಜ್‌ ಕಳುಹಿಸುವ ಶಿಕ್ಷಕಿ, ಆಕೆಯ ಡಿಮ್ಯಾಂಡ್‌ ಏನು ಗೊತ್ತಾ

ನವದೆಹಲಿ: ವಿದ್ಯೆ ನೀಡುವ ಗುರುಗಳು ದೇವರಿಗೆ ಸಮಾನ ಅನ್ನುವ ಮಾತಿದೆ. ಆದರೆ ಇಲ್ಲೊಬ್ಬ ಶಿಕ್ಷಕಿಯ ಕೃತ್ಯ ನೋಡಿದರೇ ಇಂತಹ ಶಿಕ್ಷಕರೂ ಇರುತ್ತಾರಾ ಎನ್ನದೆ ವಿಧಿಯಿಲ್ಲ.

ಉತ್ತರ ಪ್ರದೇಶದ ಕಾನ್ಪುರದ ಶಿಕ್ಷಿಕಿಯೊಬ್ಬರು ತನ್ನ ವಿದ್ಯಾರ್ಥಿಗೆ ನಡುರಾತ್ರಿಯಲ್ಲಿ ಅಶ್ಲೀಲ ಮೆಸೇಜ್‌ ಕಳಿಸಿದ್ದು ಮಾತ್ರವಲ್ಲದೆ, ತನ್ನೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ. ಉನ್ನಾವೋ ಮೂಲದ ವಿದ್ಯಾರ್ಥಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದಾರೆ. ಅದರ ಬೆನ್ನಲ್ಲಿಯೇ ವಿದ್ಯಾರ್ಥಿಯ ಪೋಷಕರು ಪೊಲೀಸ್‌ ಠಾಣೆಗೆ ತೆರಳು ದೂರು ದಾಲಿಸಿದ್ದಾರೆ. ತನ್ನ ಮಗನಿಗೆ ಶಿಕ್ಷಕಿ ನಡು ರಾತ್ರಿಯ ಸಮಯದಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಾರೆ. ಅಷ್ಟೇ ಅಲ್ಲದೆ, ಶಿಕ್ಷಕಿಯ ಪತಿ ಮತ್ತು ಸಹೋದರ ಕೂಡ ಇದೇ ಶಾಲೆಯಲ್ಲಿ ನಿಯೋಜನೆಗೊಂಡಿದ್ದು, ಮೂವರೂ ಸೇರಿ ವಿದ್ಯಾರ್ಥಿಯನ್ನು ಬೇರೆ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಹೇಳಿದ್ದಾರೆ. ಕಾನ್ಪುರದ ಕಂಟೋನ್ಮೆಂಟ್‌ ಪ್ರದೇಶದ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಂದೆ ಶಾಲೆಯ ಶಿಕ್ಷೆಯ ವಿರುದ್ಧವೇ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.

ವಿದ್ಯಾರ್ಥಿಯ ತಂದೆ ಕಂಟೋನ್ಮೆಂಟ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಅನ್ವಯ, ಆರೋಪಿಯಾಗಿರುವ ಶಿಕ್ಷಕಿ, ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ನನ್ನ ಮಗನ ಮೇಲೆ ಒತ್ತಡ ಹೇರುತ್ತಿದ್ದಳು. ಅಲ್ಲದೆ, ತನ್ನ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಡ ಹೇರುತ್ತಿದ್ದರು ಎಂದು ದೂರು ನೀಡಿದ್ದಾರೆ. ಇನ್ನು ವಿದ್ಯಾರ್ಥಿಯ ತಂದೆ ಶಿಕ್ಷಕಿಗೆ ಈ ಕುರಿತಾಗಿ ಫೋನ್‌ ಮಾಡಿ ಕೂಡ ವಿಚಾರಿಸಿದ್ದು, ಈ ವೇಳೆ ಶಿಕ್ಷಕಿ ಆಗಿದ್ದೆಲ್ಲವನ್ನೂ ಒಪ್ಪಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!