ಮಂಗಳೂರು : ಮೀನು ಹಿಡಿಯಲೆಂದು ಹೋದ ವಿದ್ಯಾರ್ಥಿ ನೀರಿನ ರಭಸಕ್ಕೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋದ ಘಟನೆ ಮಂಗಳೂರಿನ ತೋಟಬೆಂಗ್ರೆಯ ಕಡಲ ತೀರದಲ್ಲಿ ನಡೆದಿದೆ. ಮೃತ ಬಾಲಕ ಪ್ರಜೀತ್ ಎಂ ತಿಂಗಳಾಯ (15) ಎಂದು ತಿಳಿದು ಬಂದಿದೆ.
ವಿದ್ಯಾಭ್ಯಾಸದ ಖರ್ಚಿಗೆಂದು ತಂದೆ ಜೊತೆ ಪ್ರಜೀತ್ ಕೂಡಾ ಮೀನುಗಾರಿಕೆಗೆ ಹೋಗುತ್ತಿದ್ದ. ಗುರುವಾರ ಸಂಜೆ ಕೂಡಾ ಮೀನುಗಾರಿಕೆಗೆಂದು ಹೋಗಿದ್ದ ಸಂದರ್ಭದಲ್ಲಿ ಗಾಳಿ ಮತ್ತು ನೀರಿನ ರಭಸಕ್ಕೆ ಸಿಲುಕಿದ್ದು, ಸಮುದ್ರ ಪಾಲಾಗಿದ್ದ.
ತೀವ್ರ ಹುಡುಕಾಟದ ನಂತರ ಗಂಭೀರ ಸ್ಥಿತಿಯಲ್ಲಿ ಪ್ರಜೀತ್ ಪತ್ತೆಯಾಗಿದ್ದ. ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಸಾಗಿಸುವ ದಾರಿ ಮಧ್ಯೆ ಮೃತ ಪಟ್ಟಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.