ವಿಟ್ಲ: ರಜಾ ದಿನದ ಹಿನ್ನಲೆಯಲ್ಲಿ ಬೀಚ್ ಗೆ ತೆರಳಿದ್ದ ಅಪ್ರಾಪ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿದ್ದು ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ನಲ್ಲಿ ನಡೆದಿದೆ.
ವಿಟ್ಲ ಮೂಲದ ದಿಗಂತ( 15) ದಿವ್ಯರಾಜ್ (15) ತೇಜಸ್ (14) ಕೀರ್ತನ್( 16) ಅಶ್ಮಿತಾ (15) ನಿಶಾ(15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ನಲ್ಲಿ ಆಡಲು ತೆರಳಿದ್ದಾಗ ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿದ್ದು, ಅವರನ್ನು ಹತ್ತಿರದ ಮೀನುಗಾರರು ರಕ್ಷಿಸಿದ್ದು ನಾಲ್ವರು ಬದುಕುಳಿದಿದ್ದಾರೆ. ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆಯಲ್ಲಿ ನಿಶಾ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ನಿಶಾ ಮತ್ತು ಅಶ್ವಿತಾ ನೇಪಾಳ ಮೂಲದವರೆಂದು ತಿಳಿದುಬಂದಿದೆ.