ಬೆಳಗ್ಗೆಯಿಂದ ಸಂಜೆ ತನಕ ಆಟೋ ಸಾರಥಿ ರಾತ್ರಿಯಾದರೆ ಭೂತಕ್ಕೆ ಪಸರಿಸುವ ಮುಕ್ಕಾಲ್ದಿ. ಇದು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಮುಂಡಾಡಿಯ ತಿಮ್ಮಪ್ಪ ಮೂಲ್ಯರ ಪರಿಚಯ. ವೃತ್ತಿಯಲ್ಲಿ ರಕ್ಷಾ ಚಾಲಕ, ಪ್ರವೃತ್ತಿ ಭೂತಕ್ಕೆ ಪಸರಿಸುವ ಮುಕ್ಕಾಲ್ದಿ ಎರಡನ್ನೂ ಸಂಬಾಳಿಸಿಕೊಂಡು ಬದುಕು ನಡೆಸುವ ಶ್ರಮ ಜೀವಿ.
ವಿದ್ಯೆ ಹತ್ತದೆ ಸಣ್ಣ ವಯಸ್ಸಿನಲ್ಲೇ ಮುಂಬೈಯಲ್ಲಿ ಬೇಕರಿ ಕೆಲಸಕ್ಕೆ ಸೇರಿ ಕೆಲ ವರುಷ ಅಲ್ಲಿದ್ದು ಬೇಸತ್ತು ಮರಳಿ ಬಂದ ತಿಮ್ಮಪ್ಪ ಪ್ರಾರಂಭಿಸಿದ್ದು ಚಾಲಕ ವೃತ್ತಿ. ೧೯೯೦ ರಲ್ಲಿ ಆಟೋ ಚಾಲಕರಾಗಿ ವೃತ್ತಿ ಪ್ರಾರಂಭಿಸಿ ಇಂದಿಗೂ ಅದನ್ನು ಮುಂದುವರಿಸುತ್ತಿದ್ದಾರೆ. ಅವರ ರಿಕ್ಷಾ ಚಾಲನೆಗೆ ೨೩ ವರುಷ ಸಂದಿದೆ. ಈ ನಡುವೆ ಇತ್ತೀಚೆಗೆ ಭೂತಕ್ಕೆ ಪಸರಿಸುವ ವಿದ್ಯೆ ಕಲಿತು ಅದರ ಪರಿಕರ್ಮಿಯಾಗಿ ಪ್ರವೃತ್ತಿ ಆರಂಭಿಸಿದ್ದಾರೆ. ಹಗಲು ವೃತ್ತಿ ಕಾಯಕವನ್ನು ಆರಾಧಿಸಿದರೆ ರಾತ್ರಿ ದೈವಾರಾಧನೆ ಹೀಗೆ ಸಾಗುತ್ತಿದೆ ತಿಮ್ಮಪ್ಪರ ಬದುಕು
ಅಂದಿನ ಕಾಲದಲ್ಲಿ ರಿಕ್ಷಾ ಖರೀದಿಸಿದ ವೇಳೆ. ಅದು ಕಷ್ಟದ ಕಾಲ. ಒಪ್ಪೊತ್ತಿನ ಊಟಕ್ಕೂ ಶ್ರಮ ಪಡಬೇಕಿತ್ತು. ಮನೆಯ ತನಕ ರಸ್ತೆವಿರದ ಕಾರಣ ರಿಕ್ಷಾವನ್ನು ಶಿವಪ್ರಸಾದ್ ಕೇಕುಣ್ಣಾಯ ಅವರ ಮನೆಯಲ್ಲಿ ಇಟ್ಟು ಹೋಗುತ್ತಿದೆ. ಸುಮಾರು ೧೫ ವರುಷಗಳ ಕಾಲ ರಿಕ್ಷಾವನ್ನು ಅಲ್ಲೇ ಇಡುತ್ತಿದ್ದೆ. ನನಗೆ ಬೆಂಬಲ ಪ್ರೋತ್ಸಾಹ ನೀಡಿದ್ದು ಮಾತ್ರವಲ್ಲದೆ ರಿಕ್ಷಾ ನೀಡಲು ಅನುಮತಿ ಕಟ್ಟು ಪರೋಪಕಾರ ಮಾಡಿದ್ದಾರೆ ನಾನು ಸದಾ ಅವರಿಗೆ ಚಿರಋಣಿ ಎನ್ನುತ್ತಾರೆ ತಿಮ್ಮಪ್ಪ.
ನನಗೆ ಅನ್ನ ಕೊಟ್ಟ ವೃತ್ತಿ ರಿಕ್ಷಾ ಚಾಲನೆ. ಆ ಕಾಯಕವೇ ನನಗೆ ದೇವರು. ಅದಲ್ಲದೆ ನಾನು ದೈವ ಭಕ್ತ ಹಾಗಾಗಿ ಭೂತಕ್ಕೆ ಪಸರಿಸುವ ಮುಕ್ಕಾಲ್ದಿಯಾಗಿ ದೈವಾರಾಧನೆ ಮಾಡುತ್ತಿದ್ದೇನೆ. ಇದು ನನ್ನ ಅಳಿಲು ಸೇವೆ. ಬಡವನಿಗೆ ದೇಹವೇ ದೇಗುಲ ಎಂಬAತೆ ಎನ್ನುತ್ತಾರೆ ತಿಮ್ಮಪ್ಪ.
ತಿಮ್ಮಪ್ಪ ಅವರಿಗೀಗ ನಲವತ್ತೆöÊದು ವರುಷ. ರಿಕ್ಷ ಚಾಲನೆ ಮಾತ್ರವಲ್ಲದೆ ತೋಟಗಾರಿಕೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡ್ಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಇವರಿಗೆ ಭೂತಕ್ಕೆ ಪಸರಿಸಿವ ಮುಕ್ಕಾಲ್ದಿ ಎಂದು ಅಧಿಕೃತವಾಗಿ ಅಳದಂಗಡಿ ಅರಸರಿಂದ ಪಟ್ಟಿ ದೊರೆತಿದೆ. ಈಗ ಜಾತ್ರೆಯ ಸಮಯವಾದ್ದರಿಂದ ಮುಕ್ಕಾಲ್ದಿಯಾಗಿ ಹೆಚ್ಚಿನ ಬೇಡಿಕೆಯೂ ಲಭ್ಯವಾಗಿದೆ.
ಇದೆಲ್ಲವು ನನ್ನ ಭಾಗ್ಯ ಅರಸರಿಂದ ಪಟ್ಟಿ ಪಡೆದ ನಾನು ಧನ್ಯ. ಎರಡೂ ಕಾಯಕವನ್ನು ಒಟ್ಟಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ. ರಿಕ್ಷಾ ಚಾಲನ ಮಾತ್ರ ನನಗೆ ಮೊದಲ ಗುರುವಿದ್ದಂತೆ. ನನ್ನ ಬದುಕನ್ನು ಬದಲಿಸಿದ ವೃತ್ತಿ ಅದು. ಎಂದೆAದಿಗೂ ಬಿಡಲಾರೆ. ಎನ್ನುತ್ತಾರೆ ತಿಮ್ಮಪ್ಪ.
ತಿಮ್ಮಪ್ಪ ಮೂಲ್ಯ ಎಂದರೆ ರಿಲ್ಷಾ ಸ್ಟಾö್ಯಂಡ್‌ನಲ್ಲೂ ಎಲ್ಲರಿಗೂ ಪ್ರೀತಿ. ಎಲ್ಲರೊಡನೆ ಬೆರೆಯುವ ಅವರು ಸದಾ ಹಸೋನ್ಮುಖಿಯಾಗಿ. ಪರೋಪಕಾರಿಯಾಗಿ ಶ್ರಮದಿಂದ ಜೀವನ ಸಾಗಿಸುತ್ತಿರುವ ಇವರ ಬದುಕು ಹಸನಾಗಲಿ. ರಕ್ಷಾ ಚಾಲನೆ ವೃತ್ತಿ ನಿತಂತರವಾಗಿ ಮುಂದುವರಿಯಲಿ ಎನ್ನುವುದು ನಮ್ಮ ಬಯಕೆ.
ಲೇಖನ: ಅಶ್ವಿನಿ ಕೆ.ಎನ್