ಹುಡುಗಿಯರಂದ್ರೆ ಡೇಂಜರಪ್ಪೊ ಹುಷಾರಾಗಿರಪ್ಪೊ. ಬೆಣ್ಣೆ ಮಾತಿಗೆ ಬೆರಗಾಗೋದ್ರೆ ಬೆಪ್ಪರಾಗ್ತಿರಪ್ಪೊ ಎಂಬ ಮಾತು ಈ ಮನುಷ್ಯನಗಿ ಫಿಟ್ ಅನ್ಸುತ್ತೆ ಯಾಕಂದ್ರೆ. ಈ ವ್ಯಕ್ತಿ ಮಹಿಳೆಯರಿಗೆ ಹೆದರಿ 55 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ.
ಏನಿದು ಮಹಿಳೆಯರಿಂದ ದೂರ ಅನ್ನುವವನ ಕಥೆ: ಕ್ಯಾಲಿಟ್ಸ್ ನ್ಜಾಮ್ವಿಟಾ ಆಫ್ರಿಕಾದ ರುವಾಂಡಾ ನಿವಾಸಿ. ಇವರು ತಮ್ಮ 16ನೇ ವಯಸ್ಸಿನಲ್ಲಿ ಯಾವುದೇ ಸ್ತ್ರೀ ಸಂಪರ್ಕದಿಂದ ದೂರವಿರಲು ನಿರ್ಧರಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ ವ್ಯಕ್ತಿಗೆ ಮಹಿಳೆಯರು ಅಂದರೆ ಭಯ ಅದೇನೋ ಆತಂಕ. ಕಳೆದ 55 ವರ್ಷಗಳಿಂದ ಈ ಕಾರಣಕ್ಕೆ ಮನೆಯಲ್ಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ.
ತಮ್ಮ ನಿರ್ಧಾರ ಇತರರಿಗೆ ಅರ್ಥಪಡಿಸಲು ಈ ವ್ಯಕ್ತಿ 15 ಅಡಿ ಬೇಲಿಯನ್ನು ನಿರ್ಮಿಸಿದ್ದಾರೆ. ಯಾವುದೇ ಹೆಣ್ಣು ಮನೆಯೊಳಗೆ ಪ್ರವೇಶಿಸದಂತೆ ಸ್ವತಃ ಬ್ಯಾರಿಕೇಡ್ ಹಾಕಿಕೊಂಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಕ್ಯಾಲಿಟ್ಸ್ ನ್ಜಾಮ್ವಿಟಾ ಹೇಳಿದ್ದು ಹೀಗೆ- ‘ನನಗೆ ಮಹಿಳೆಯರು ಕಂಡರೆ ಅದೇನೋ ಭಯ ಆತಂಕ. ಹೀಗಾಗಿ ನಾನು ಅವರಿಂದ ದೂರವಿರಲು ಬಯಸುತ್ತೇನೆ. ಅದಕ್ಕಾಗಿ ನಾನು ನನ್ನ ಮನೆಗೆ ಬೇಲಿಯನ್ನು ಹಾಕಿದ್ದೇನೆ. ಜೊತೆಗೆ ಬೀಗ ಕೂಡ ಹಾಕಿಕೊಂಡಿರುತ್ತೇನೆ. ಆ ಮೂಲಕ ನಾನು ಅವರು ನನ್ನ ಬಳಿ ಬರುವುದನ್ನು ನಿಷೇಧಿಸಿದ್ದೇನೆ’ ಎಂದು ಹೇಳಿದ್ದಾರೆ.
ಕ್ಯಾಲಿಟ್ಸ್ ನ್ಜಾಮ್ವಿಟಾ ನ ನೆರೆಹೊರೆಯವರೇ ಆತನಿಗೆ ಬೇಕಾದ ಆಹಾರ ಮತ್ತು ದಿನಸಿ ವಸ್ತುಗಳನ್ನು ನೀಡುತ್ತಾರೆ. ಯಾರಾದರೂ ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದಾಗ, ಅವನು ಯಾರೊಂದಿಗೂ ಮಾತನಾಡಲು ಹತ್ತಿರದಲ್ಲಿರಲು ಬಯಸುವುದಿಲ್ಲ ಎಂಬ ಮಾಹಿತಿ ದೊರೆತಿದೆ.