ಕ್ರೊಯೇಷಿಯಾದ ವಿದೇಶಾಂಗ ಸಚಿವರು ಸಭೆಯೊಂದಕ್ಕೆ ಆಗಮಿಸಿದ ಜರ್ಮನ್ ಸಚಿವೆಗೆ ತುಂಬಿದ ಸಭೆಯಲ್ಲಿ ಕೆನ್ನೆಗೆ ಸಿಹಿಮುತ್ತು ನೀಡಿ ಸ್ವಾಗತಿಸಿದ ಆಘಾತಕಾರಿ ಘಟನೆ ಬರ್ಲಿನ್‌ನಲ್ಲಿ ನಡೆದಿದೆ. ಸಚಿವರ ವರ್ತನೆಗೆ ಸುತ್ತಲಿದ್ದ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಸ್ವತಃ ಜರ್ಮನ್ ಸಚಿವೆಯೂ ಶಾಕ್ ಆಗಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ವೈರಲ್ ಆಗಿದೆ. ಇವರ ನಡೆ ಈಗ ಭಾರಿವಿವಾದಕ್ಕೆ ಕಾರಣವಾಗಿದೆ. ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡಾನ್ ಗ್ರಿಲಿಕ್ ರಾಡ್ಮನ್ ಎಂಬುವವರೇ ಹೀಗೆ ಜರ್ಮನ್ ಸಚಿವೆಗೆ ಮುತ್ತಿಟ್ಟು ವಿವಾದಕ್ಕೆ ಕಾರಣವಾದವರು.
ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡನ್ ಗ್ರ್ಲಿಕ್ ರಾಡ್‌ಮನ್ ಅವರು ಬರ್ಲಿನ್‌ನಲ್ಲಿ ಗ್ರೂಪ್ ಫೋಟೋ ಸೆಷನ್ ವೇಳೆ ಈ ಕೃತ್ಯವೆಸಗಿದ್ದಾರೆ. ತಮ್ಮ ಜರ್ಮನ್ ಸಹವರ್ತಿ ಅನ್ನಾಲೆನಾ ಬೇರ್‌ಬಾಕ್ ಅವರ ಬಳಿ ಆಗಮಿಸಿದ ಗೋರ್ಡನ್ ಆಕೆಯ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಆದರೆ ಸುತ್ತಲಿದ್ದವರೆಲ್ಲಾ ಇವರನ್ನೇ ರಫ್ ಅಂತ ನೋಡಿ ಮುಖ ಬೇರೆಡೆ ತಿರುಗಿಸಿಕೊಂಡಿದ್ದಾರೆ., ಕ್ಷಣದಲ್ಲೇ ಅವರು ವಾಸ್ತವಕ್ಕೆ ಬಂದಿದ್ದು, ಈ ದೃಶ್ಯದ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ. ಜರ್ಮನ್ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಬಳಿ ಬಂದ ಗೋರ್ಡನ್ ಮೊದಲಿಗೆ ಅವರ ಕೈ ಕುಲುಕಿ ಕೆನ್ನೆಗೆ ಮುತ್ತಿಡುವುದು ಕಾಣಿಸುತ್ತಿದೆ. ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಕಾನ್ಫರೆನ್ಸ್‌ನಲ್ಲಿ ಈ ಘಟನೆ ನಡೆದಿದೆ.
🇭🇷#Croatia's foreign minister tries to #kiss his #German counterpart at a #summit.https://t.co/cHt7WG53wJ pic.twitter.com/1EpCUslcRL
— Enigma Intel (@IntelEnigma) November 4, 2023