Site icon newsroomkannada.com

ಮುಸ್ಲಿಂ ಯುವಕನಿಂದ ದಲಿತ ಹಿಂದೂ ಯುವಕನ ಹತ್ಯೆ

ದಲಿತ ವರ್ಗಕ್ಕೆ ಸೇರಿದ ಹಿಂದೂ ಯುವಕನನ್ನು ಅನ್ಯಕೋಮಿನ ಯುವಕ ಮತ್ತು ಆತನ ಗ್ಯಾಂಗ್ ಹತ್ಯೆ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ರಾಕೇಶ್ (22 ವರ್ಷ) ಮೃತ ಯುವಕನಾಗಿದ್ದಾನೆ.

 

ಯಾದಗಿರಿಯ ಶಹಾಪುರ್ ಪೇಟ್ ಬಡವಾವಣೆಯಲ್ಲಿ ಹತ್ಯೆ ನಡೆದಿದೆ. ಫಯಾಜ್ ಎಂಬಾತ ತನ್ನ ಗ್ಯಾಂಗ್ ಮೂಲಕ ಯುವಕನ ಮನೆಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದು ಹದಿನೆಂಟು ಗಂಟೆಗಳಾದರೂ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ತೀವ್ರ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ತಡವಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version