main logo

ಮೊಬೈಲ್ ಚಾರ್ಜ್‌ಗಿಟ್ಟು ಮಾತನಾಡುವ ವೇಳೆ ಸ್ಫೋಟ: ಮಹಿಳೆ ಸಾವು

ಮೊಬೈಲ್ ಚಾರ್ಜ್‌ಗಿಟ್ಟು ಮಾತನಾಡುವ ವೇಳೆ ಸ್ಫೋಟ: ಮಹಿಳೆ ಸಾವು

ತಮಿಳುನಾಡು: ಮೊಬೈಲನ್ನು  ಚಾರ್ಜ್‌ ಗೆ ಇಟ್ಟು ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾವನಪ್ಪಿದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ಮೃತ ಮಹಿಳೆ ಕೊಕಿಲಾಂಪಾಲ್ (33) ದುರಂತ ಅಂತ್ಯಕಂಡಿದ್ದಾಳೆ. ಮಹಿಳೆ ಮೊಬೈಲನ್ನು ಚಾರ್ಚ್‌ಗೆ ಇಟ್ಟು, ಫೋನ್ ಬಂತೆಂದು ಮಾತನಾಡಲು ಶುರು ಮಾಡಿದ್ದಾಳೆ. ಈ ಸಂದರ್ಭದಲ್ಲಿ ಕೆಲ ನಿಮಿಷಗಳ ಬಳಿಕ ಮೊಬೈಲ್ ಸ್ಪೋಟ ಗೊಂಡಿದೆ. ಇದರ ತೀವ್ರತೆಗೆ ಮಹಿಳೆ ಸಾವನಪ್ಪಿದ್ದಾಳೆ.

ಮೃತ ಮಹಿಳೆಯ ಪತಿ, ಕೆಲ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದರು. ಈಗ ಅಪ್ಪ-ಅಮ್ಮನನ್ನು ಕಳೆದುಕೊಂಡು ಗಂಡು ಮಗು ಅನಾಥವಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!