ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನಿಗೆ ಆಳಸಮುದ್ರದಲ್ಲಿಯೇ ಹೃದಯಾಘಾತವಾದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಪಣಂಬೂರು ತೀರದಿಂದ ಬೇಬಿ ಮೇರಿ ಬೋಟ್ ನಲ್ಲಿ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ವಸಂತ ಎಂಬುವರಿಗೆ ಕಡಲ ತೀರದಿಂದ 36 ನಾಟೆಕಲ್ ಮೈಲ್ ದೂರದಲ್ಲಿ ಹೃದಯಾಘಾತ ವಾಗಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಮೀನುಗಾರರು ಕೋಸ್ಟ್ ಗಾರ್ಡ್ ಗೆ ಸಹಾಯಯಾಚಿಸಿ ತುರ್ತು ಕರೆ ಮಾಡಿದ್ದರು. ಬಳಿಕ ವಸಂತ ಅವರಿಗೆ ಸಮುದ್ರ ಮಧ್ಯದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದಡಕ್ಕೆ ಕರೆತಂದು ಆಸ್ಪತ್ರೆ ಗೆ ದಾಖಲಿಸಿದ್ದರು. ಇದೀಗ ಕೋಸ್ಟ್ ಗಾರ್ಡ್ ಕಾರ್ಯಕ್ಷಮತೆಯಿಂದ ಮೀನುಗಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.