main logo

ಮಸೀದಿ ಕಾಂಪೌಂಡ್ ನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಪ್ರಕರಣ : ಓರ್ವನ ಬಂಧನ

ಮಸೀದಿ ಕಾಂಪೌಂಡ್ ನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಪ್ರಕರಣ : ಓರ್ವನ ಬಂಧನ

ಕಡಬ: ಮರ್ದಾಳದಲ್ಲಿ ಮಸೀದಿ ಆವರಣದೊಳಗೆ ಬೈಕ್ ಚಲಾಯಿಸಿ ಅಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿ ಪರಾರಿಯಾಗಿದ್ದ ಇಬ್ಬರು ಕಿಡಿಗೇಡಿಗಳ ಪೈಕಿ ಒಬ್ಬಾತನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್ (25) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಕೈಕಂಬ ನಡ್ತೋಟ ನಿವಾಸಿ ಸಚಿನ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇಬ್ಬರು ಕಿಡಿಗೇಡಿಗಳು ಬೈಕಿನಲ್ಲಿ ಮಸೀದಿ ಆವರಣವನ್ನು ಪ್ರವೇಶಿಸಿ ಬಳಿಕ ಅಲ್ಲಿಂದ ಹೊರ ಹೋಗುತ್ತಿರುವ ದೃಶ್ಯ ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು.

ಕಡಬ ತಾಲೂಕಿನ ಮರ್ದಾಳ ಬದ್ರಿಯಾ ಜುಮಾ ಮಸೀದಿಯ ಆವರಣದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದ ಕಿಡಿಗೇಡಿಗಳು ಬಳಿಕ ಮಸೀದಿಯ ಧರ್ಮಗುರುಗಳನ್ನ ನೋಡಿ ಅಲ್ಲಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಇದೀಗ, ಘಟನೆ ನಡೆದ 24 ಗಂಟೆಯಲ್ಲಿ ಓರ್ವ ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿಯಶಸ್ವಿಯಾಗಿರುವ ಕಡಬ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿಯನ್ನೂ ಸಹ ಶೀಘ್ರವಾಗಿ ಬಂಧಿಸಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಇಂತಹ ಕಿಡಿಗೇಡಿಗಳಿಗೆ ಕಾನೂನು ಮೂಲಕ ತಕ್ಕ ಪಾಠ ಕಲಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!