main logo

ಮುಳ್ಳುಗುಡ್ಡೆ ಕೊರಗಜ್ಜನ ಪವಾಡ : ಕಾಡಿನಲ್ಲಿ ಕಳೆದು ಹೋಗಿದ್ದ ಯುವಕ ಪತ್ತೆ!

ಮುಳ್ಳುಗುಡ್ಡೆ ಕೊರಗಜ್ಜನ ಪವಾಡ : ಕಾಡಿನಲ್ಲಿ ಕಳೆದು ಹೋಗಿದ್ದ ಯುವಕ ಪತ್ತೆ!

ಹೆಬ್ರಿ: ಒಂದು ವಾರದಿಂದ ನಾಪತ್ತೆಯಾಗಿದ್ದ ಯುವಕನೊಬ್ಬ ಮುಳ್ಳುಗುಡ್ಡೆ ಕೊರಗಜ್ಜನ ಅಭಯದಂತೆ 8 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾದ ಪವಾಡ ಸದೃಶ ಘಟನೆಯೊಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ವರದಿಯಾಗಿದೆ.

ಇಲ್ಲಿನ ಮುಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ವಿವೇಕಾನಂದ ಎಂಬ ಯುವಕ ಸೆ.16ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.

ಮನೆಯವರು ಎಷ್ಟು ಹುಡುಕಾಡಿದರೂ ಯುವಕನ ಸುಳಿವು ಪತ್ತೆಯಾಗಿರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಈ ಯುವಕನ ಮನೆಯವರು ಮುಳ್ಳುಗುಡ್ಡೆ ಕೊರಗಜ್ಜನ ಸನ್ನಿಧಾನಕ್ಕೆ ಬಂದು ಮೊರೆ ಇಟ್ಟಿದ್ದರು.

‘ಹಂದಿಯೊಂದು ಓಡಿಸಿಕೊಂಡು ಹೋಗಿರುವ ಕಾರಣ ಆತ ದಾರಿ ತಪ್ಪಿಸಿಕೊಂಡಿದ್ದಾನೆ, ಹಕ್ಕಿಯೊಂದು ದಾರಿ ತೋರಿಸಿದೆ. ಹಳದಿ ಬಣ್ಣದ ಅಂಗಿ ಹಾಕಿಕೊಂಡು ಕಾಡಿನಲ್ಲಿ ಅಡಗಿ ಕುಳಿತಿದ್ದಾನೆ. ಐದು ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಇದು ಸಾಧ್ಯವಾಗದೇ ಇದ್ದಲ್ಲಿ ಇನ್ನು ಎರಡು ದಿನಗಳ ಒಳಗೆ ಆತ ಮನೆಗೆ ಮರಳುತ್ತಾನೆ’ ಎಂದು ಕ್ಷೇತ್ರದ ಧರ್ಮದರ್ಶಿ ಪುನೀತ್ ಈ ಸಂದರ್ಭದಲ್ಲಿ ಹೇಳಿದ್ದರು.

ಅದರಂತೆ, ಮಿಸ್ಸಾಗಿದ್ದ ಯುವಕ ವಿವೇಕಾನಂದ ತನ್ನ ಜೊತೆಯಲ್ಲಿದ್ದ ನಾಯಿಯ ಜೊತೆ ವಾಪಾಸಾಗಿದ್ದಾನೆ. ಈ ಎಂಟು ದಿನಗಳ ಕಾಲ ಆತ ಕಾಡಿನಲ್ಲಿ ಕೇವಲ ನೀರು ಕುಡಿದು ಬದುಕಿ ಬಂದಿರುವುದು ಅಜ್ಜನ ಪವಾಡವೆಂದೇ ಇದೀಗ ಮನೆಯವರು ಮತ್ತು ಆ ಭಾಗದ ಜನರು ನಂಬುವಂತಾಗಿದೆ.

ವಿವೇಕಾನಂದ ಮನೆಗೆ ಬಂದೊಡನೆ ಕ್ಷೇತ್ರದಲ್ಲಿ ಸೂಚಿಸಿದ್ದಂತೆ ಯುವಕನನ್ನು ಮುಳ್ಳುಗುಡ್ಡ ಕೊರಗಜ್ಜನ ಸನ್ನಿಧಾನಕ್ಕೆ ಕರೆತಂದು ಮನೆಮಂದಿ ಪ್ರಾರ್ಥನೆ ಸಲ್ಲಿಸಿದರು.

ವಿವೇಕಾನಂದ ಚಿಕ್ಕಂದಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗೆಂದು ಇದುವರೆಗೆ  ಮನೆಯವರು ಸುಮಾರು 25 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಈ ನಡುವೆ ಆತ ನಾಪತ್ತೆಯಾಗಿದ್ದರಿಂದ ಮನೆಮಂದಿಯೆಲ್ಲಾ ಮತ್ತೆ ಚಿಂತೆಗೊಳಗಾಗಿದ್ದರು. ಇದೀಗ ಯುವಕ ಸುರಕ್ಷಿತವಾಗಿ ಮನೆ ಸೇರಿರುವುದು ಎಲ್ಲರಲ್ಲೂ ಸಂತಸಕ್ಕೆ ಕಾರಣವಾಗಿದ್ದು, ಇದು ಕೊರಗಜ್ಜನ ಕಾರಣಿಕದಿಂದಲೇ ಸಾಧ್ಯವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!