main logo

ನಿಫಾ ವೈರಸ್: ಕೇರಳ-ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್

ನಿಫಾ ವೈರಸ್: ಕೇರಳ-ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ (Nipah virus) ಆತಂಕ ಹಿನ್ನಲೆಯಲ್ಲಿ ಕರ್ನಾಟಕ (Karnataka) ಕೇರಳ (Kerala) ಗಡಿ ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಈ ಭಾಗದಲ್ಲಿ ಪ್ರತೀದಿನ ಸಾವಿರಾರು ಜನರು ಓಡಾಡುತ್ತಾರೆ.

ಈ ಹಿನ್ನಲೆಯಲ್ಲಿ ರಾಜ್ಯದ ಗಡಿ ಪ್ರದೇಶವಾಗಿರುವ ತಲಪಾಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಮಾಡಿ ಕೇರಳದಿಂದ ಬರುವ ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತಿದ್ದು, ಯಾರಲ್ಲಾದರೂ ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಸ್ವಾಬ್ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ.

ಕೆ.ಎಲ್ 30, 40, 60  ವಾಹನಗಳನ್ನ ಹೊರತುಪಡಿಸಿ ಕೇರಳ ಭಾಗದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ.

40 -70 ಶೇಕಡದಷ್ಟಿರುವ ನಿಫಾ ಸಾವಿನ ಪ್ರಮಾಣ, ಸೆಪ್ಟೆಂಬರ್  01ರಂದು ಕೇರಳದಲ್ಲಿ ಕೊನೆಯ ನಿಫಾ ಪ್ರಕರಣ ಪತ್ತೆಯಾಗಿತ್ತು. ಕೊನೆಯ ನಿಫಾ ಅವಧಿ ಮುಗಿಯುವ ಅಕ್ಟೋಬರ್ 10ರವರೆಗೂ ಕಟ್ಟೆಚ್ಚರ ವಹಿಸಲಾಗಿದೆ.

‘ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಮ್ಮ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ನಿಫಾ ಕುರಿತು ಜನ ಆತಂಕಪಡುವ ಅಗತ್ಯವಿಲ್ಲ..’ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಅಕ್ಟೋಬರ್ 10ರಂದು ಕೇರಳದ ಕೊನೆಯ ನಿಫಾ ಸೋಂಕಿನ ಇನ್ಕ್ಯೂಬೇಷನ್ ಅವಧಿ ಮುಕ್ತಾಯಗೊಳ್ಲಲಿದ್ದು, ಈ ಹಿನ್ನಲೆಯಲ್ಲಿ ಇನ್ಕ್ಯೂಬೇಷನ್ ಅವಧಿ ಪೂರ್ಣಗೊಳ್ಳುವವರೆಗೂ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!