ಕೊಡಗು: ದಟ್ಟ ಅರಣ್ಯದ ನಡುವೆ ಮಹಿಳೆಯ ಮೃತದೇಹವೊಂದು ಟ್ರಾಲಿ ಬ್ಯಾಗ್ ನಲ್ಲಿ ಪತ್ತೆಯಾಗಿರುವ ಆತಂಕಕಾರಿ ಘಟನೆ ವಿರಾಜಪೇಟೆ ಸಮೀಪದ ಮಕುಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಈ ನತದೃಷ್ಟ ಮಹಿಳೆಯನ್ನು ದುಷ್ಕರ್ಮಿಗಳು ಎಲ್ಲಿಯೋ ಕೊಲೆ ಮಾಡಿ ಬಳಿಕ ಈ ಅರಣ್ಯ ಪ್ರದೇಶದಲ್ಲಿ ತಂದು ಹಾಕಿರಬಹುದೆಂದು ಪೊಲೀಸರು ಇದೀಗ ಶಂಕಿಸಿದ್ದಾರೆ.
ಸುಮಾರು 25 ರಿಂದ 35 ವರ್ಷದ ಪ್ರಾಯದ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಸುಮಾರು 15 ದಿನಗಳ ಹಿಂದೆ ಈ ಕೊಲೆ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಗೆ ಕಳುಹಿಸಿಕೊಡಲಾಗಿದೆ.
ಈ ಅರಣ್ಯ ಪ್ರದೇಶ ಕೊಡಗು ಮತ್ತು ಕೇರಳದ ಮಧ್ಯಬಾಗದಲ್ಲಿ ಬರುವುದರಿಂದ ಈಕೆ ಕೇರಳದ ಮಹಿಳೆ ಆಗಿರಬಹುದೆಂಬ ಶಂಕೆಯನ್ನೂ ಸಹ ಪೊಲೀಸರು ಇದೀಗ ವ್ಯಕ್ತಪಡಿಸಿದ್ದಾರೆ.