ನಳಂದಾ: ಬಿಹಾರದ ನಳಂದಾದಲ್ಲಿ ಇಬ್ಬರು ಪೊಲೀಸ್ ಪೇದೆಗಳು ನಡುರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್ನಲ್ಲಿವೈರಲ್ ಆಗಿದೆ. ಇಬ್ಬರು ಪೊಲೀಸರು ಒಬ್ಬ ಅಧಿಕಾರಿ ಸಾರ್ವಜನಿಕರ ಮುಂದೆಯೇ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಮೊದಲು ಓರ್ವ ಪೊಲೀಸ್ ಮತ್ತೋರ್ವ ಪೋಲೀಸಪ್ಪನ ಮೇಲೆ ಕೋಲಿನಿಂದ ಹೊಡೆದಿದ್ದಾನೆ. ಇಬ್ಬರೂ ನಂತರ ಮುಷ್ಟಿ ಹೊಡೆದಾಟದಲ್ಲಿ ತೊಡಗುತ್ತಾರೆ, ಬಳಿಕ ಪರಸ್ಪರರ ಕುತ್ತಿಗೆಯನ್ನು ಹಿಡಿದು ಕಾಳಗದಲ್ಲಿ ತೊಡಗುತ್ತಾರೆ. ಇದೇ ವೇಳೆ ಹೊಡೆದಾಟ ನಡೆಸುವುದು ಮೇಲಧಿಕಾರಿಗಳಿಗೆ ಗೊತ್ತಾದರೆ ಅಮಾನತು ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ಪೊಲೀಸರು ಅವರ ಮಾತಿಗೆ ಕಿವಿಗೊಡದೆ ಹೊಡೆದಾಟ ಮುಂದುವರಿಸುವುದು ವಿಡಿಯೋದಲ್ಲಿದೆ. ಈ ಘಟನೆಯನ್ನು ಹಲವರು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೋವನ್ನು ಗಮನದಲ್ಲಿಟ್ಟುಕೊಂಡು, ನಳಂದಾ ಪೊಲೀಸರು ಇಬ್ಬರೂ ಪೊಲೀಸರನ್ನು ಪೊಲೀಸ್ ಕೇಂದ್ರಕ್ಕೆ ಕಳುಹಿಸಿದ್ದು ತನಿಖೆಗೆ ಆದೇಶಿಸಿದ್ದಾರೆ.
बिहार पुलिस के जवान आपस में हिसाब-किताब करते हुए, नालंदा का वीडियो. pic.twitter.com/8KWlChndwl
— Utkarsh Singh (@UtkarshSingh_) September 18, 2023