ಪೋರ್ಚುಗಲ್: ಪೋರ್ಚುಗಲ್ನ ಸಾವೊ ಲೊರೆಂಕೊ ಡಿ ಬೈರೊ ಪಟ್ಟಣದ ರಸ್ತೆ ವೈನ್ ನದಿಯಂತೆ ಹರಿಯಲು ಆರಂಭವಾದಾಗ ಜನರಲ್ಲಿ ಆಶ್ಚರ್ಯದೊಂದಿಗೆ ಆತಂಕದ ವಾತಾವರಣವೂ ಉಂಟಾಯಿತು.
ಅದೇ ರೀತಿ ಪ್ರವಾಹದ ರೀತಿಯಲ್ಲಿ ರಸ್ತೆ ಯಲ್ಲಿ ವೈನ್ ನದಿ ಹರಿಯುವುದನ್ನು ಕಂಡು ಜನರು ದಿಗ್ಬ್ರಮೆಗೊಂಡರು.
ಹೀಗೆ ರಸ್ತೆ ತುಂಬೆಲ್ಲಾ ಹರಿದ ವೈನ್ ನ ಪ್ರಮಾಣವೆಷ್ಟು ಗೊತ್ತೇ, ಅಧಿಕೃತ ಮಾಹಿತಿಗಳ ಪ್ರಕಾರ ಸುಮಾರು 2.2 ಮಿಲಿಯನ್ ಟನ್ ಈ ರೀತಿಯಾಗಿ ರಸ್ತೆ ತುಂಬೆಲ್ಲಾ ಮಳೆ ನೀರಿನಂತೆ ಹರಿದು ಹೋಗಿದೆ!
ನಿಜಕ್ಕೂ ಅಲ್ಲಿ ಆಗಿದ್ದೇನು..?: ಅನಾಡಿಯಾ ಪ್ರದೇಶದ ಡಿಸ್ಟಲರಿಯೊಂದರಲ್ಲಿ ವೈನ್ ಬಾಟ್ಲಿಂಗ್ ಗಾಗಿ ಇರಿಸಲಾಗಿದ್ದ ಟ್ಯಾಂಕರ್ ಗಳು ಸಿಡಿದು ಪ್ರವಾಹದಂತೆ ರಸ್ತೆಯಲ್ಲಿ ಹರಿಯಿತು.
ಇದು ಜನರಲ್ಲಿ ಆಶ್ಚರ್ಯದೊಂದಿಗೆ ಆತಂಕಕ್ಕೆ ಕಾರಣವಾಗಿದೆ. 2.2 ಮಿಲಿಯನ್ ಈ ರೀತಿ ಹರಿದಿದೆ. ಸಾಮಾನ್ಯವಾಗಿ ಒತ್ತಡ ತಡೆಯಲಾರದೆ ಈ ರೀತಿ ಟ್ಯಾಂಕರ್ ಗಳು ಸಿಡಿಯುತ್ತವೆ ಎಂದು ಡಿಸ್ಟಿಲರಿ ಸಿಬ್ಬಂದಿ ತಿಳಿಸಿದ್ದಾರೆ.
ವೈನ್ ಹತ್ತಿರದ ನದಿಗೆ ಸೇರದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಿದೆ. ಆದರೆ, ಹಲವು ಮನೆಗಳಿಗೆ ವೈನ್ ಹರಿದು ಪ್ರವಾಹದಂತೆ ಸೇರಿದೆ.
ಲೆವಿರಾ ಡಿಸ್ಟಿಲರಿ ಘಟನೆ ಕುರಿತು ಕ್ಷಮೆಯಾಚಿಸಿದ್ದು, ವೈನ್ ನಿಂದ ಆವೃತವಾಗಿರುವ ಭೂಮಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ತಿಳಿಸಿದೆ.
The citizens of Levira, Portugal were in for a shock when 2.2 million liters of red wine came roaring down their streets on Sunday. The liquid originated from the Levira Distillery, also located in the Anadia region, where it had been resting in wine tanks awaiting bottling. pic.twitter.com/lTUNUOPh9B
— Boyz Bot (@Boyzbot1) September 12, 2023