ಮಂಗಳೂರು: ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದ ಯವತಿಯೊಬ್ಬಳನ್ನು ಕದ್ರಿ ಪೊಲೀಸರು ಠಾಣೆಯಲ್ಲಿ ಹಿಡಿದಿಡಲು ಹರಸಾಹಸ ಪಟ್ಟ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಕಮಿಷನರ್ ಈ ಬಗ್ಗೆ ಅರೆಬರೆ ಸ್ಪಷ್ಟನೆ ನೀಡಿದ್ದಾರೆ.
ಸೆ.1 ರಂದು ಬೆಳಗ್ಗೆ 5.45ಕ್ಕೆ ಪಂಪಲ್ ನಲ್ಲಿ ಮೆಡಿಕಲ್ ಒಂದಕ್ಕೆ ಯುವತಿ ಬಂದಿದ್ದು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು. ರೌಂಡ್ ನಲ್ಲಿದ್ದ ಅಬಕಾರಿ ಇಲಾಖೆಯವರು ಆಕೆಯನ್ನು ಹಿಡಿದು ಆಸ್ಪತ್ರೆಗೆ ಬಯಲು ಯತ್ನಿಸಿದಾಗ, ಅಲ್ಲಿಯೂ ಆಕೆ ದಾಳಿಗೆ ಮುಂದಾಗಿದ್ದಾಳೆ, ಇದರಿಂದ ಬೇಸತ್ತು ಯುವತಿಯನ್ನು ಕದ್ರಿ ಠಾಣೆಗೆ ತಂದಿದ್ದರು, ಆದರೆ ಯುವತಿಯನ್ನು ಅಲ್ಲಿಯೂ ಹಿಡಿದಿಡಲು ಮಹಿಳು ಸಿಬಂದಿ ಹರಸಾಹಸಪಟ್ಟಿದ್ದಾರೆ.
ಬಳಿಕ ಕಾಲಿಗೆ ಕೋಳ ತೊಡಿಸಿ ಕೈಕಾಲು ಕಟ್ಟಿ ಆಸ್ಪತ್ರೆಗೆ ಒಯ್ದಿದ್ದು ತಪಾಸಣೆ ಮಾಡಿದ್ದಾರೆ. ಡ್ರಗ್ಸ್ ವ್ಯಸನದಿಂದ ಆಕೆ ಈ ರೀತಿ ವರ್ತಿಸುತ್ತಿದ್ದಾಳೆಂಬ ಸಂಶಯದಿಂದ ಚೆಕ್ ಮಾಡಿದಾಗ, ನೆಗೆಟಿವ್ ಬಂದಿದೆ. ಪೋಷಕರ ಬಗ್ಗೆ ಕೇಳಿದಾಗಲೂ ಮಾಹಿತಿ ನೀಡುತ್ತಿರಲಿಲ್ಲ. ಒಮ್ಮೆ ಹಿಂದಿ, ಇನ್ನೊಮ್ಮೆ ಇಂಗ್ಲಿಷ್ ಮಾತಾಡುತ್ತಿದ್ದಳು. ಮಾನಸಿಕ ತಜ್ಞರಲ್ಲಿ ತೋರಿಸಬೇಕೆಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಕಡೆಗೆ ಪೊಲೀಸರು ಒಯ್ಯುತ್ತಿದ್ದಾಗ, ಆಕೆ ತನ್ನ ಮನೆ ಇಲ್ಲೇ ಇದೆಯೆಂದು ಹೇಳಿದ್ದಾಳೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ, ಮತ್ತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಆಕೆಗೆ ಮಾನಸಿಕ ಸಮಸ್ಯೆಯಂತೆ, ಹಾಗಾಗಿ ಮನೆಯಲ್ಲೇ ಇಟ್ಟು ಚಿಕಿತ್ಸೆ ನೀಡುತ್ತಿದ್ದರಂತೆ. ಆದರೆ, ಈ ಕುರಿತು ಸರಿಯಾದ ಮಾಹಿತಿ ಪೊಲೀಸರಲ್ಲಿ ಇಲ್ಲ.