main logo

ಆರ್‌ಎಸ್‌ಎಸ್‌ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿಲ್ಲ ಎಂಬ ಪ್ರಶ್ನೆಗೆ ಭಾಗವತ್‌ ಹೇಳಿದ್ದೇನು ಗೊತ್ತಾ

ಆರ್‌ಎಸ್‌ಎಸ್‌ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿಲ್ಲ ಎಂಬ ಪ್ರಶ್ನೆಗೆ ಭಾಗವತ್‌ ಹೇಳಿದ್ದೇನು ಗೊತ್ತಾ

ನಾಗ್ಪುರ: ನಮ್ಮ ಸಮಾಜದಲ್ಲಿ ತಾರತಮ್ಯವಿದ್ದು, ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ.

ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1947 ರಲ್ಲಿ ಭಾರತದಿಂದ ಬೇರ್ಪಟ್ಟವರು ಈಗ ತಾವು ತಪ್ಪು ಮಾಡಿದ್ದೇವೆ ಎಂದು ಭಾವಿಸುತ್ತಿದ್ದರೆ. ಆದರೆ ಇಂದಿನ ಯುವಕರಿಗೆ ವಯಸ್ಸಾಗುವ ಮೊದಲು ‘ಅಖಂಡ ಭಾರತ’ ಅಥವಾ ಅವಿಭಜಿತ ಭಾರತವು ನಿಜವಾಗಲಿದೆ ಎಂದು ಹೇಳಿದರು.
ಮರಾಠಾ ಸಮುದಾಯದ ಮೀಸಲಾತಿ ಆಂದೋಲನವು ತೀವ್ರಗೊಂಡಿರುವ ಸಮಯದಲ್ಲಿ ಮೀಸಲಾತಿ ಕುರಿತು ಭಾಗವತ್ ಅವರ ಹೇಳಿಕೆ ಮಹತ್ವ ಪಡೆದಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಸಹಜೀವಿಗಳನ್ನು ನಾವು ಅಸ್ಪ್ರೃಶ್ಯರಂತೆ ಕಂಡಿದ್ದೇವೆ. 2000 ವರ್ಷಗಳವರೆಗೆ ಅವರ ಬಗ್ಗೆ ನಾವು ಕಾಳಜಿಯನ್ನೇ ವಹಿಸಲಿಲ್ಲ. ಅವರಿಗೆ ಸಮಾನತೆ ಒದಗಿಸುವವರೆಗೆ, ಕೆಲವು ವಿಶೇಷ ಪರಿಹಾರ ಅಗತ್ಯ.

ಅವುಗಳಲ್ಲಿ ಮೀಸಲಾತಿ ಕೂಡ ಒಂದು. ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿಗೆ ಆರ್‌ಎಸ್‌ಎಸ್‌ ಬೆಂಬಲ ಒದಗಿಸುತ್ತದೆ ಎಂದರು.
1950 ರಿಂದ 2002 ರವರೆಗೆ ಮಹಲ್ ಪ್ರದೇಶದಲ್ಲಿ ಆರ್‌ಎಸ್‌ಎಸ್ ತನ್ನ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರಂದು ನಾವು ಎಲ್ಲಿದ್ದರೂ ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ. ನಾಗ್ಪುರದ ಮಹಲ್ ಮತ್ತು ರೇಶಿಂಬಾಗ್‌ ಎರಡೂ ಕ್ಯಾಂಪಸ್‌ಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತಿದೆ. ಜನರು ಈ ಪ್ರಶ್ನೆಯನ್ನು ನಮಗೆ ಕೇಳಬಾರದು.” 1933ರಲ್ಲಿ ಜಲಗಾಂವ್ ಬಳಿ ನಡೆದ ಕಾಂಗ್ರೆಸ್‌ನ ತೇಜ್‌ಪುರ ಸಮಾವೇಶದ ವೇಳೆ ಪಂಡಿತ್ ಜವಾಹರಲಾಲ್ ನೆಹರು ಅವರು 80 ಅಡಿ ಕಂಬದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದು, ಧ್ವಜ ಮಧ್ಯದಲ್ಲಿ ಸಿಲುಕಿಕೊಂಡಿತು. ಈ ವೇಳೆ ಸುಮಾರು 10,000 ಜನರ ಗುಂಪಿನಲ್ಲಿದ್ದ ಯುವಕನೊಬ್ಬ ಕಂಬವನ್ನು ಹತ್ತಿ ಧ್ವಜವನ್ನು ಮುಕ್ತಗೊಳಿಸಿದನು.

ಪಂಡಿತ್ ಜವಾಹರ್‌ಲಾಲ್ ನೆಹರು ಅವರು ಮರುದಿನ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಕೇಳಿಕೊಂಡರು, ಆದರೆ ಆತ ಆರ್‌ಎಸ್‌ಎಸ್‌ ಶಾಖೆಗೆ ಹೋಗುತ್ತಿದ್ದಾನೆ ಎಂದು ಕೆಲವರು ಹೇಳಿದ್ದರಿಂದ ಮರುದಿನ ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ಆತನನ್ನು ತಡೆದರು. ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರಿಗೆ ಈ ವಿಷಯ ತಿಳಿದಾಗ ಅವರು ಯುವಕನ ಮನೆಗೆ ಭೇಟಿ ನೀಡಿ ಅವನನ್ನು ಮನದುಂಬಿ ಹೊಗಳಿದರು ಎಂದರು. ಆ ಯುವಕನ ಹೆಸರು ಕಿಶನ್ ಸಿಂಗ್ ರಜಪೂತ್ ಎಂದು ಸ್ಮರಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!