main logo

ಸಿಟಿ ಬಸ್ಸಿನಿಂದ ರಸ್ತೆಗೆ ಬಿದ್ದು ಮೃತಪಟ್ಟ ನಿರ್ವಾಹಕನ ಕುಟುಂಬಕ್ಕೆ ಧನ ಸಹಾಯ

ಸಿಟಿ ಬಸ್ಸಿನಿಂದ ರಸ್ತೆಗೆ ಬಿದ್ದು ಮೃತಪಟ್ಟ ನಿರ್ವಾಹಕನ ಕುಟುಂಬಕ್ಕೆ ಧನ ಸಹಾಯ

ಮಂಗಳೂರು: ಕೆಲ ದಿನಗಳ ಹಿಂದೆ ನಂತೂರು ಭಾಗದಲ್ಲಿ ಚಲಿಸುತ್ತಿದ್ದ ಸಿಟಿ ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟು ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಿರ್ವಾಹಕ ಗುರು ಯಾನೆ ಈರಯ್ಯ ಅವರ ಕುಟುಂಬಕ್ಕೆ ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ, ಮಂಗಳೂರು ಇದರ ವತಿಯಿಂದ ಒಂದು ಲಕ್ಷ ರೂಪಾಯಿಯ ಚೆಕ್ ವಿತರಿಸಲಾಯ್ತು.

ದಕ್ಷಿಣ ಕನ್ನಡ ಬಸ್ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅವರು ಮೃತನ ಸಹೋದರಿಗೆ ಈ ಸಹಾಯಧನದ ಚೆಕ್ ನೀಡಿದರು.

ಈ ಸಂದರ್ಭದಲ್ಲಿಕರಾವಳಿ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ತಾವ್ರೋ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷರಾದ ರಾಮಚಂದ್ರ ನಾಯಕ್, ಯಶು ಚಂದ್ರಕಲಾ, ವಿನ್ನಿ ಡಿಸೋಜ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!