main logo

ವಿಶ್ವಕಪ್ ಸೆಣೆಸಾಟಕ್ಕೆ Team India ಪ್ರಕಟ : ಸಂಜು ಸ್ಯಾಮ್ಸನ್ ಗಿಲ್ಲ ಸ್ಥಾನ

ವಿಶ್ವಕಪ್ ಸೆಣೆಸಾಟಕ್ಕೆ Team India ಪ್ರಕಟ : ಸಂಜು ಸ್ಯಾಮ್ಸನ್ ಗಿಲ್ಲ ಸ್ಥಾನ

ಅಕ್ಟೋಬರ್ 5ರಿಂದ ಪ್ರಾರಂಭಗೊಳ್ಳಲಿರುವ ವಿಶ್ವಕಪ್ ಸೆಣೆಸಾಟಕ್ಕೆ ‘ಟೀಂ ಇಂಡಿಯಾ’ ಪ್ರಕಟಗೊಂಡಿದ್ದು, 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆದಾರರು ಕೆ.ಎಲ್. ರಾಹುಲ್ ಮೇಲೆ ಮತ್ತೆ ಭರವಸೆ ಇರಿಸಿದ್ದಾರೆ. ಆದರೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ವಿಫಲರಾಗಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಟೀಂ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ಮತ್ತು ಟೀಂ ಕೋಚ್ ರಾಹುಲ್ ದ್ರಾವಿಡ್ ಸಭೆ ನಡೆಸಿ ಶನಿವಾರದಂದು (ಸೆ.02) ಈ ತಂಡವನ್ನು ಅಂತಿಮಗೊಳಿಸಿದ್ದಾರೆ.

ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಸ್ಟೇಡಿಯಂನಲ್ಲಿ ಭಾರತ-ಪಾಕ್ ಪಂದ್ಯ ಮಳೆಯಿಂದ ರದ್ದುಗೊಂಡ ಬಳಿಕ ನಡೆದ ಸಭೆಯಲ್ಲಿ ಈ ತಂಡವನ್ನು ಅಂತಿಮಗೊಳಿಸಲಾಗಿದೆ.

ಇದೀಗ ನಡೆಯುತ್ತಿರುವ ಏಷ್ಯಾಕಪ್ ತಂಡದಲ್ಲಿ ಆಡುತ್ತಿರುವ ಬಹುತೇಕ ಆಟಗಾರರು ವಿಶ್ವಕಪ್ ತಂಡದಲ್ಲೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರನ್ನೇ ಕಪ್ತಾನನ್ನಾಗಿ ಮುಂದುವರಿಸಲಾಗಿದ್ದು, ವಿರಾಟ್ ಕೊಹ್ಲಿ ಅನುಭವಿ ಆಟಗಾರನ ಸ್ಥಾನದಲ್ಲಿದ್ದಾರೆ.

ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿರುವ ಇಶಾನ್ ಕಿಶನ್ ಅವರು ಶುಭಮನ್ ಗಿಲ್ ಜೊತೆ ತಂಡದಲ್ಲಿ ಸ್ಥಾನವನ್ನು ಪಡೆದಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಸರದಿಗೆ ಬಲ ತುಂಬಲಿದ್ದಾರೆ. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಆಲ್ ರೌಂಡರ್ ಪಾತ್ರವನ್ನು ನಿಭಾಯಿಸಲಿದ್ದಾರೆ.

ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ, ಇವರಿಗೆ ಮಹಮ್ಮದ್ ಶಮಿ ಮತ್ತು ಮಹಮ್ಮದ್ ಸಿರಾಜ್ ಸಾಥ್ ನೀಡಿದರೆ, ಚೈನಾಮನ್ ಬೌಲರ್ ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿಭಾಯಿಸಲಿದ್ದಾರೆ.

ಏಷ್ಯಾಕಪ್ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿರುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ವಿಶ್ವಕಪ್ ತಂಡಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ.

ಟೀಂ ಇಂಡಿಯಾ ತನ್ನ ಪ್ರಥಮ ಪಂದ್ಯವನ್ನು ಅಕ್ಟೋಬರ್ 08ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ.

ವಿಶ್ವಕಪ್ ಗೆ ಪ್ರಕಟಗೊಂಡ ‘ಟೀಂ ಇಂಡಿಯಾ’

ರೋಹಿತ್ ಶರ್ಮಾ (ಕಪ್ತಾನ), ಹಾರ್ದಿಕ್ ಪಾಂಡ್ಯ (ಉಪ ಕಪ್ತಾನ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ, ಮಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ ಕೃಷ್ಣ.

Related Articles

Leave a Reply

Your email address will not be published. Required fields are marked *

error: Content is protected !!