main logo

VIDEO NEWS: ಬೆಟ್ಟದ ಮೇಲೊಂದು ಅಲ್ಲಲ್ಲ.. ನೆಲದಡಿಯಲ್ಲಿ ನಿರ್ಮಾಣಗೊಂಡಿದೆ ಸುಂದರ ಬಂಗಲೆ!

VIDEO NEWS: ಬೆಟ್ಟದ ಮೇಲೊಂದು ಅಲ್ಲಲ್ಲ.. ನೆಲದಡಿಯಲ್ಲಿ ನಿರ್ಮಾಣಗೊಂಡಿದೆ ಸುಂದರ ಬಂಗಲೆ!

ಹರ್ಡೋಯಿ: ನೆಲದ ಮೇಲೆ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬರು ನೆಲದಡಿಯಲ್ಲಿ (Under Ground) ಎರಡು ಮಹಡಿಗಳ ಸುಸಜ್ಜಿತ ಮನೆ ನಿರ್ಮಿಸಿ ಸಖತ್ ಸುದ್ದಿಯಾಗಿದ್ದಾರೆ.

ಉತ್ತರ ಪ್ರದೇಶದ (Uttar Pradesh) ಹರ್ಡೋಯಿಯಲ್ಲಿ (Hardoi) ವ್ಯಕ್ತಿಯೊಬ್ಬರು ನೆಲದಡಿಯಲ್ಲಿ ಎರಡು ಮಹಡಿಗಳ ಮನೆ ನಿರ್ಮಿಸಿದ್ದು ಇದಕ್ಕಾಗಿ ಆ ವ್ಯಕ್ತಿ 12 ವರ್ಷಗಳನ್ನು ವ್ಯಯಿಸಿದ್ದಾರೆ.

ನೆಲದಡಿಯಲ್ಲಿ ನಿರ್ಮಾಣಗೊಂಡಿರುವ ಈ ಮನೆಯಲ್ಲಿ ಹನ್ನೊಂದು ಕೋಣೆಗಳು, ಒಂದು ಮಸೀದಿ, ಮೆಟ್ಟಿಲುಗಳು, ಒಂದು ಗ್ಯಾಲರಿ ಹಾಗೂ ಒಂದು ಡ್ರಾಯಿಂಗ್ ಕೋಣೆ ಇದೆ.

ಇರ್ಫಾನ್ (Irfan) ಅಥವಾ ಪಪ್ಪು ಬಾಬಾ (Pappu Baba) ಎಂದೇ ಕರೆಯಲ್ಪಡುವ ವ್ಯಕ್ತಿಯೇ ಈ ಸಾಹಸಕ್ಕೆ ಕೈ ಹಾಕಿ ಅದರಲ್ಲೀಗ ಯಶಸ್ಸನ್ನು ಕಂಡವರಾಗಿದ್ದಾರೆ. ಇರ್ಪಾನ್ ಈ ಮನೆ ನಿರ್ಮಾಣ ಕಾರ್ಯವನ್ನು 2011ರಲ್ಲಿ ಪ್ರಾರಂಭಿಸಿದ್ದರು.

ಚೂಪಾದ ಸಲಕರಣೆಯಾಗಿರುವ ಖುರ್ಪಾ (Khurpa) ಸಹಾಯದಿಂದ ಇರ್ಫಾನ್ ಅವರು ತನ್ನ ಈ ಭೂಗತ ಅರಮನೆಯ ಗೋಡೆಗಳ ಮೇಲೆ ಹಳೆಯ ಕಾಲದ ಕೆತ್ತನೆಗಳನ್ನೂ ಮೂಡಿಸಿದ್ದಾರೆ.

ಇದೀಗ ಇರ್ಫಾನ್ ದಿನದ ಬಹಳಷ್ಟು ಸಮಯವನ್ನು ಈ ನೆಲದಾಳದ ಮನೆಯಲ್ಲೇ ಕಳೆಯುತ್ತಿದ್ದು, ಕುಟುಂಬ ಸದಸ್ಯರೊಂದಿಗೆ ಊಟ ಮಾಡಲು ಮಾತ್ರ ತನ್ನ ಮನೆಗೆ ಬರುತ್ತಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ವರದಿಗಳ ಪ್ರಕಾರ, ಇರ್ಫಾನ್ ಅವರು 2010ರವರಗೆ ಅಂದರೆ ತನ್ನ ತಂದೆ ನಿಧನರಾಗುವವರೆಗೆ ತನ್ನ ಕುಟುಂಬದೊಂದಿಗೆ ವಾಸವಾಗಿದ್ದರು. ಆದರೆ ಆ ಬಳಿಕ ಅವರ ಜೀವನದಲ್ಲಿ ನಾಟಕೀಯ ಬದಲಾವಣೆಗಳು ಸಂಭವಿಸತೊಡಗಿದವು.

ಮೊದಲಿಗೆ ಅವರು ಅಲ್ಲಿನ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲುತ್ತಾರೆ. ಇದರಿಂದ ಮನೆ ತೊರೆದ ಇರ್ಫಾನ್ ಆ ಬಳಿಕ ಮಾನಸಿಕವಾಗಿ ಬಹಳ ಕುಗ್ಗಿ ಹೋಗುತ್ತಾರೆ.

ಆ ಬಳಿಕ, ಇರ್ಫಾನ್ ಒಂದು ಏಕಾಂತ ಸ್ಥಳದಲ್ಲಿ ಭೂಗತ ಮನೆಯೊಂದನ್ನು ನಿರ್ಮಿಸುವ ಯೋಚನೆಯನ್ನು ಮಾಡುತ್ತಾರೆ. ಈ ರೀತಿಯಾಗಿ ತನಗೆ ಬೇಕಾಗಿದ್ದ ಏಕಾಂತ ಮತ್ತು ಶುಷ್ಕ ಜಾಗ ದೊರಕಿದ ಬಳಿಕ ಆತ ಈ ಮನೆ ನಿರ್ಮಾಣದ ಕೆಲಸವನ್ನು ಪ್ರಾರಂಭಿಸುತ್ತಾರೆ. ಇದರ ಸುತ್ತಲಿರುವ ಜಾಗದಲ್ಲಿ ಅವರು ಬೇಸಾಯ ಮಾಡುತ್ತಾರೆ ಮತ್ತು ಇಲ್ಲೊಂದು ಬಾವಿಯನ್ನೂ ಸಹ ಅವರೇ ತೋಡಿದ್ದು, ಆದರೀಗ ಅದನ್ನು ಯಾರೋ ಕಿಡಿಗೇಡಿಗಳು ಮುಚ್ಚಿಬಿಟ್ಟಿದ್ದಾರೆ.

ಒಟ್ಟಿನಲ್ಲಿ ತನ್ನ ಏಕಾಂತ ವಾಸಕ್ಕೆ ಪೂರಕವಾಗುವಂತೆ ಇರ್ಫಾನ್ ನಿರ್ಮಿಸಿರುವ ಈ ಭೂಗತ ಮನೆ ಇದೀಗ ಊರಲ್ಲಿ ಮಾತ್ರವಲ್ಲದೇ, ಮಾಧ್ಯಮ ಪ್ರಚಾರದ ಮೂಲಕ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.

Related Articles

Leave a Reply

Your email address will not be published. Required fields are marked *

error: Content is protected !!