ಪುತ್ತೂರು: ಸದಾ ಕೋಮು ವಿಚಾರಕ್ಕೆ ಸುದ್ದಿಯಾಗುತ್ತಿರುವ ಕರಾವಳಿ ಭಾಗದಲ್ಲಿ ಒಂದು ಸೌಹಾರ್ದತೆಯ ‘ಬರ್ತ್ ಡೇ’ ಆಚರಣೆ ಸಖತ್ ಸುದ್ದಿಯಾಗ್ತಿದೆ.
ವಿಟ್ಲದ ಪುಣಚದಲ್ಲಿ ಮುಸ್ಲಿಂ ಯುವಕರು ಸೇರಿಕೊಂಡು ತಮ್ಮ ಹಿಂದೂ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದ್ದು, ಕೋಮು ಕುದಿಯಾಗಿರುವ ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಸಿಂಚನಕ್ಕೆ ಸಾಕ್ಷಿಯಾಗಿದೆ.
ಪುಣಚದ ದಿವಾಕರ್ ಎಂಬ ಯುವಕನ ಜನ್ಮ ದಿನವನ್ನು ಇಲ್ಲಿನ ‘ಪಿರ್ಸತೆ ಚಂಹಿಮಾರ್ ಮುಸ್ಲಿಂ ಗ್ರೂಪ್’ನ ಸದಸ್ಯರು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.
ತಮ್ಮ ಹಿಂದು ಗೆಳೆಯನಿಗೆ ಬರ್ತ್ ಡೇ ಶುಭಾಶಯಗಳನ್ನು ಕೋರಿ ವಿಭಿನ್ನವಾಗಿ ಆಚರಿಸಿಕೊಂಡ ಈ ಜನ್ಮದಿನಾಚರಣೆಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.