main logo

ಸೇನೆಯಲ್ಲಿ ಸೇವೆ ಸಲ್ಲಿಸಿ ಆಗಮಿಸುತ್ತಿರುವ ವೀರಯೋಧನಿಗೆ ನಾಳೆ(ಆ.5) ಹುಟ್ಟೂರ ಗೌರವ

ಸೇನೆಯಲ್ಲಿ ಸೇವೆ ಸಲ್ಲಿಸಿ ಆಗಮಿಸುತ್ತಿರುವ ವೀರಯೋಧನಿಗೆ ನಾಳೆ(ಆ.5)  ಹುಟ್ಟೂರ ಗೌರವ

ಪುತ್ತೂರು: ಭಾರತೀಯ ಸೇನೆಯಲ್ಲಿ (ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್‌ ಸೇನಾ ಪಡೆ) 20 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿ ಊರಿಗೆ ಆಗಮಿಸುತ್ತಿರುವ ಬಾಲಕೃಷ್ಣ ಎನ್‌. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಗೌರವಿಸುವ ಕಾರ್ಯಕ್ರಮ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಆ.5 ರಂದು ಸಾಯಂಕಾಲ 7ಕ್ಕೆ ಆಯೋಜಿಸಲಾಗಿದೆ. ಅವರ ಹಿತೈಷಿಗಳು, ಗ್ರಾಮಸ್ಥರು, ಕುಟುಂಬಿಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.

ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಪಟ್ಟೆ ದಿ. ಮಹಾಲಿಂಗ ಪಾಟಾಳಿ ಮತ್ತು ಗಿರಿಜಾ ದಂಪತಿಯ ನಾಲ್ಕನೇ ಪುತ್ರ ಬಾಲಕೃಷ್ಣ ಎನ್‌. ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದು, ಆ.5ರಂದು ತನ್ನ ಊರಿಗೆ ಮರಳುತ್ತಿದ್ದಾರೆ. 2003 ರಲ್ಲಿ ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್‌ ಸೇನಾ ಪಡೆಗೆ ಸೇರ್ಪಡೆಗೊಂಡು ರಾಜಸ್ಥಾನದ ಅಜ್ಮೀರ್‌ನಲ್ಲಿ ಬೇಸಿಕ್‌ ಟ್ರೈನಿಂಗ್‌ ಮುಗಿಸಿ ಜಮ್ಮು ಕಾಶ್ಮೀರ, ನಾಗಲ್ಯಾಂಡ್‌, ಛತ್ತೀಸ್‌ಗಡ, ಪಂಜಾಬ್‌, ಚಂಡೀಗಡ ಮತ್ತು ಅಸ್ಸಾಂಗಳಲ್ಲಿ ಸುದೀರ್ಘ 20 ವರ್ಷಗಳ ಕಾಲ ನಿಷ್ಠಯಿಂದ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ ಉತ್ಕೃಷ್ಟ ಸೇವಾ ಪದಕ ಪ್ರಶಸ್ತಿ ಕೂಡ ಲಭಿಸಿದೆ.

ಕಾರ್ಯಕ್ರಮದಲ್ಲಿ ವಾಣಿಯನ್‌ / ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು, ವಾಲಿ ಫ್ರೆಂಡ್ಸ್ ಪಟ್ಟೆ, ಶ್ರೀಕೃಷ್ಣ ಯುವಕಮಂಡಲ ಪಟ್ಟೆ ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!