main logo

ಸಿಎಂ ಎದುರೇ ಮಂಗಳೂರು ಕಾಂಗ್ರೆಸ್‌ ನಾಯಕಿಯರ ಹೂಗುಚ್ಛ ಕಿತ್ತಾಟ

ಸಿಎಂ ಎದುರೇ ಮಂಗಳೂರು ಕಾಂಗ್ರೆಸ್‌ ನಾಯಕಿಯರ ಹೂಗುಚ್ಛ ಕಿತ್ತಾಟ

ಮಂಗಳೂರು: ಮಳೆ ಹಾನಿ ವೀಕ್ಷಣೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಅವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಶಾಲೆಟ್‌ ಪಿಂಟೋ ಹಾಗೂ ಮಂಗಳೂರು ಪಾಲಿಕೆಯ ಮಾಜಿ ಮೇಯರ್‌ ಕವಿತಾ ಸನಿಲ್‌ ಕಿತ್ತಾಟ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವಿಮಾನ ನಿಲ್ದಾಣದಲ್ಲಿ ಆಗಿದ್ದೇನು: ಮಂಗಳೂರಿನ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ, ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ತನ್ನ ಬೆಂಬಲಿಗರ ಜೊತೆ ಜೈಕಾರ ಹಾಕುತ್ತಾ ಹೂಗುಚ್ಛ ನೀಡಲು ಮುಂದೆ ಬಂದಿದ್ದಾರೆ. ಈ ವೇಳೆ, ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದು ಶಾಲೆಟ್ ಹತ್ತಿರ ಹೋಗದಂತೆ ತಡೆದಿದ್ದಾರೆ. ಶಾಲೆಟ್ ಪಿಂಟೋ ಹೂವಿನ ಮಾಲೆ ಹಾಕಲು ಬಂದಾಗ ಕವಿತಾ ಸನಿಲ್ ದೂಡಿದ್ದು ಇಬ್ಬರ ಕಿತ್ತಾಟಕ್ಕೆ ಸಾಕ್ಷಿಯಾಯಿತು.

ಸಿದ್ದರಾಮಯ್ಯ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಮಹಿಳಾ ನಾಯಕಿಯರು, ಹೂಮಾಲೆ ಹಾಕಲು ಮುಂದೆ ಬಂದಿದ್ದರು. ಈ ವೇಳೆ, ಸಿದ್ದರಾಮಯ್ಯ ಕಾರಿಗೆ ಕವಿತಾ ಸನಿಲ್, ಅಡ್ಡ ಬಂದಿರುವುದು, ಕಾರು ಹೋದ ಬಳಿಕ ಕವಿತಾ ಮತ್ತು ಶಾಲೆಟ್ ಪಿಂಟೋ ಕಿತ್ತಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇಬ್ಬರು ನಾಯಕಿಯರ ಜಡೆ ಕಿತ್ತಾಟ ನೋಡಿದ ಕಾಂಗ್ರೆಸ್‌ ನಾಯಕರು ಮುಸಿ ಮುಸಿ ನಕ್ಕಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!