ಪಾಟ್ನಾ: ಹನಿಮೂನ್ ಟ್ರಿಪ್ ಗೆಂದು ಡಾರ್ಜಿಲಿಂಗ್ಗೆ ಹೊರಟಿದ್ದ ನವವಿವಾಹಿತ ಮಹಿಳೆ ರೈಲಿನಿಂದ ನಾಪತ್ತೆಯಾಗಿದ್ದಾರೆ. ಕಾಜಲ್ ಕುಮಾರಿ ತನ್ನ ಪತಿಯೊಂದಿಗೆ ಜುಲೈ 28 ರಂದು ನವದೆಹಲಿ- ಜಲಪೈಗುರಿ ಸೂಪರ್ಫಾಸ್ಟ್ ರೈಲಿನಲ್ಲಿ ಹನಿಮೂನ್ ಟ್ರಿಪ್ಗಾಗಿ ಡಾರ್ಜಿಲಿಂಗ್ಗೆ ತೆರಳುತ್ತಿದ್ದರು. ದಂಪತಿ ಬಿಹಾರದ ಮುಜಾಫರ್ಪುರದಿಂದ ರೈಲು ಏರಿದ್ದರು.
ರೈಲು ಕಿಶನ್ಗಂಜ್ ರೈಲು ನಿಲ್ದಾಣವನ್ನು ತಲುಪಿದಾಗ, ನನ್ನ ಹೆಂಡತಿ ಶೌಚಾಲಯಕ್ಕೆ ಹೋಗಿದ್ದು, ಹಿಂತಿರುಗಲಿಲ್ಲ. ರೈಲು ಚಲಿಸಲು ಪ್ರಾರಂಭಿಸಿದಾಗ ನಾನು ಆಕೆ ಮರಳಿ ಬಾರದಿರುವುದನ್ನು ಕಂಡು ರೈಲಿನ ಪ್ರತಿಯೊಂದು ಕೋಚ್ ಅನ್ನು ಹುಡುಕಿದೆ. ಆದರೂ ಆಕೆ ಪತ್ತೆಯಾಗಲಿಲ್ಲ. ಬಳಿಕ ಮುಜಾಫರ್ಪುರಕ್ಕೆ ಹಿಂತಿರುಗಿ ಘಟನೆಯ ಬಗ್ಗೆಕಿಶನ್ಗಂಜ್ ಜಿಆರ್ಪಿಗೆ ದೂರು ನೀಡಿದೆ ಎಂದು ಆಕೆಯ ಪತಿ ತಿಳಿಸಿದ್ದಾರೆ. ಜಿಆರ್ಪಿ ಅಧಿಕಾರಿಗಳು ಕಿಶನ್ಗಂಜ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಒಟ್ಟಿನಲ್ಲಿ ಹನಿಮೂನ್ ಸವಿಯಲು ಹೊರಟಿದ್ದ ದಂಪತಿಯ ಸವಿಸಮಯಕ್ಕೆ ಭಂಗ ಬಂದಿದ್ದು, ಪತ್ನಿ ನಾಪತ್ತೆಯಾದ ಕಾರಣ ಪತಿ ವಿರಹ ವೇದನೆಯೊಂದಿಗೆ ಚಿಂತೆಯಲ್ಲಿ ಮುಳುಗುವಂತಾಗಿದೆ.