main logo

ಸಾಕುನಾಯಿಗೆ ವಿಷವಿಕ್ಕಿ ಹತ್ಯೆ: ದೂರು

ಸಾಕುನಾಯಿಗೆ ವಿಷವಿಕ್ಕಿ ಹತ್ಯೆ: ದೂರು

ಮಂಗಳೂರು: ಸಾಕು ನಾಯಿಗೆ ವಿಷವಿಕ್ಕಿ ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ನಗರದ ಕಾಪಿಕಾಡ್‌ 4 ನೇ ಕ್ರಾಸ್‌ ನಿವಾಸಿಯೋರ್ವರು ನಾಲ್ಕುವರೆ ವರ್ಷದ ಡಾಬರ್‌ ಮೆನ್‌ ನಾಯಿ ಸಾಕುತ್ತಿದ್ದರು. ಜುಲೈ 24 ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆ ಅವಧಿಯಲ್ಲಿ ನೆರೆಮನೆಯ ಬೀಮಯ್ಯ ಎಂಬಾತ ಪೂರ್ವದ್ವೇಷದ ಹಿನ್ನಲೆಯಲ್ಲಿ ನಾಯಿಗೆ ಯಾವುದೋ ವಿಷ ಪದಾರ್ಥ ಹಾಕಿದ್ದು, ಪರಿಣಾಮ ಜು.25ರಂದು ಮಧ್ಯಾಹ್ನ 3ಗಂಟೆಗೆ ರಕ್ತವಾಂತಿ ಮಾಡಿ ಮೃತಪಟ್ಟಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!