ಮಂಗಳೂರು: ಸಾಮಾನ್ಯವಾಗಿ 112 ಗೆ ಯಾವುದೇ ದುರ್ಘಟನೆ ಸಂದರ್ಭ ಸಹಾಯಕ್ಕಾಗಿ ಕರೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾಗಿದೆ ಎಂದು ಕರೆ ಮಾಡಿ ಪೊಲೀಸರನ್ನೇ ಬೇಸ್ತು ಬೀಳಿಸಿದ್ದಾರೆ.
ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದ. ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ. ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ನಂಬರ್ ಗೆ ಕರೆ ಮಾಡಿದ್ದಾನೆ. ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿದೆ ಎಂದು ಯುವಕ ಹೇಳಿದ್ದಾನೆ. ಬಳಿಕ ಪೊಲೀಸರು ಚಪ್ಪಲಿಗಾಗಿ ಹುಡುಕಾಡಿದರು ಪ್ರಯೋಜನವಾಗಲಿಲ್ಲ. ಆದರೆ ಸಭಾಂಗಣದ ಆವರಣದಲ್ಲಿರುವ ಸಿಸಿಟಿವಿ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದಾರೆ.