ವಾರಣಾಸಿ: ದೇಶದೆಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ರೈತರು ಟೊಮ್ಯಾಟೊ ಕಳ್ಳತನ ತಪ್ಪಿಸಲು ಸಿಸಿಟಿವಿ ಅಳವಡಿಸಿದ್ದು, ಹಳೇ ಸುದ್ದಿ ಈಗ ತರಕಾರಿ ಅಂಗಡಿಗಳಲ್ಲಿ ಟೊಮೆಟೊ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿದ್ದು ಉತ್ತರಪ್ರದೇಶದ ವಾರಣಾಸಿಯಲ್ಲಿ ತರಕಾರಿ ಮಾರಟಗಾರನೊಬ್ಬ ಬೌನ್ಸರ್ ಗಳನ್ನು ನೇಮಿಸಿಕೊಂಡಿದ್ದಾನೆ,
ವಾರಣಾಸಿಯ ತರಕಾರಿ ಮಾರಾಟಗಾರ ಅಜಯ್ ಫೌಜಿ ಅವರು ತಮ್ಮ ಭದ್ರತೆಗಾಗಿ ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾರೆ. ಕೆಲವು ಗ್ರಾಹಕರು ಟೊಮೆಟೊಗಳನ್ನು ಖರೀದಿಸುವಾಗ ಬೆಲೆ ಕೇಳಿ ಆಕ್ರೋಶಗೊಳ್ಳುತ್ತಾರೆ. ಕೆಲ ಗ್ರಾಹಕರು ಬೆಲೆ ವಿಚಾರದಲ್ಲಿ ನನ್ನೊಂದಿಗೆ ಜಗಳವಾಡಲು ಪ್ರಾರಂಭಿಸುತ್ತಾರೆ. ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ಈ ನಿಟ್ಟಿನಲ್ಲಿ ನನಗೆ ಯಾವುದೇ ತೊಂದರೆ ಆಗಬಾರದು ಎಂದು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದೇನೆ ಎಂದು ಪೌಜಿ ತಿಳಿಸುತ್ತಾರೆ.
ವಾರಣಾಸಿಯಲ್ಲಿ ಟೊಮೆಟೊ ಕೆಜಿಗೆ 160 ರಿಂದ 180 ರೂಗಳವರೆಗೆ ಮಾರಾಟವಾಗುತ್ತಿವೆ. ಇದೇ ಕಾರಣಕ್ಕೆ ಜನರು 100 ಗ್ರಾಂಗಳ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ.