main logo

ವೆನ್ಲಾಕ್‌ ಆಸ್ಪತ್ರೆ ನೂತನ ಕಟ್ಟಡದಲ್ಲಿ ಯುವಕ ಆತ್ಮಹತ್ಯೆ

ವೆನ್ಲಾಕ್‌ ಆಸ್ಪತ್ರೆ ನೂತನ ಕಟ್ಟಡದಲ್ಲಿ ಯುವಕ ಆತ್ಮಹತ್ಯೆ

ಮಂಗಳೂರು: ಕಡಬ ತಾಲೂಕು ನಿವಾಸಿ ಆನಂದಗೌಡ ಎಂಬವರ ಪುತ್ರ ದಿವಾಕರ್ (36) ಎಂಬುವರು ವೆನ್ಲಾಕ್ ಆಸ್ಪತ್ರೆಯ ನೂತನ ಕಟ್ಟಡದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 2023ರ ಜೂನ್ 30ರಂದು ಅತಿಯಾದ ಮದ್ಯ ಸೇವನೆಯಿಂದಾಗಿ ಅಸ್ವಸ್ಥಗೊಂಡಿದ್ದ ದಿವಾಕರ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್‌ 30ರಂದು 8:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ದಿವಾಕರ್ ನಿರ್ಮಾಣ ಸ್ಥಳದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಆತನ ಸಹೋದರ ಚಂದ್ರಶೇಖರ್ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಪ್ರಕಾರ ಯುಡಿಆರ್ ಸಂಖ್ಯೆ 54/23 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!