main logo

ತಹಸೀಲ್ದಾರ್‌ ಅಜಿತ್‌ ರೈ ಬಂಧಿಸಿದ ಲೋಕಾಯುಕ್ತ: ಅಧಿಕಾರಿ ಕೃಷಿ ಭೂಮಿ ಮೌಲ್ಯವೇ 300 ಕೋಟಿ ರೂ.

ತಹಸೀಲ್ದಾರ್‌ ಅಜಿತ್‌ ರೈ ಬಂಧಿಸಿದ ಲೋಕಾಯುಕ್ತ: ಅಧಿಕಾರಿ ಕೃಷಿ ಭೂಮಿ ಮೌಲ್ಯವೇ 300 ಕೋಟಿ ರೂ.

ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವ ಹಿನ್ನೆಲೆ ಕೆಆರ್​ ಪುರ ತಹಶೀಲ್ದಾರ್ ಅಜಿತ್​ ರೈ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ಅಜಿತ್ ರೈ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸತತ 30 ಗಂಟೆಗಳ ಶೋಧ ನಡೆಸಿ ಲಭ್ಯವಾದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವುದು ಕಂಡು ಬಂದ ಹಿನ್ನೆಲೆ ಅಜಿತ್ ರೈ ಅವರನ್ನು ಬಂಧಿಸಲಾಗಿದ್ದು, 24 ಗಂಟೆಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಅಜಿತ್​ ರೈಗೆ ಸಂಬಂಧಿಸಿದ 10 ಸ್ಥಳಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್​ಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

 

ತಹಶೀಲ್ದಾರ್ ಮನೆಯಲ್ಲಿ ಪತ್ತೆಯಾಗಿರುವುದೇನೇನು?

  • ಸಾಕಷ್ಟು ಬೇನಾಮಿ ಆಸ್ತಿ ಪಾಸ್ತಿಗಳು ಪತ್ತೆ
  • ಅಜಿತ್ ನಿವಾಸದಲ್ಲಿ 1.9 ಕೋಟಿ ಮೌಲ್ಯದ ವಸ್ತುಗಳು ಮತ್ತು 40 ಲಕ್ಷ ನಗದು, 700 ಗ್ರಾಂ ಚಿನ್ನ ಪತ್ತೆ
  • ದೊಡ್ಡಬಳ್ಳಾಪುರದ ಬಳಿಯ 98 ಎಕ್ಕರೆ ಭೂಮಿ ಪತ್ರ ಲಭ್ಯ, ಇದರ ಅಂದಾಜು ಮೌಲ್ಯ 300 ಕೋಟಿ
  • ಬೆಂಗಳೂರು ಗ್ರಾಮಾಂತರದ ಕಲ್ಲೂರು ಬಳಿ ಹೊಂದಿರುವ 30 ಎಕ್ಕರೆ ಜಮೀನು ಪತ್ರ ಪತ್ತೆ
  • ಲ್ಯಾಂಡ್ ಕ್ರೂಜರ್, ಇನ್ನೋವಾ, ಫಾರ್ಚುನಾರ್, ಮಿನಿ ಕೂಪರ್ ಕಾರು, ಡುಕಾಟಿ ಸೇರಿ ಐಷಾರಾಮಿ ಬೈಕ್​ಗಳು ಪತ್ತೆ

ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ. ಆದರೂ ಆದಾಯ ಮತ್ತು ದೊರೆತಿರುವ ಆಸ್ತಿಗಳು ಹಾಗೂ ಐಶಾರಾಮಿ ವಸ್ತುಗಳಿಗೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!