ವಿಟ್ಲ: ವಿವಾಹಿತ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಿಟ್ಲ ಕಸಬ ಗ್ರಾಮದ ಜೋಗಿಮಠ ನಿವಾಸಿ ಅನಿಶಾ (34 ವರ್ಷ) ಎಂದು ಗುರುತಿಸಲಾಗಿದೆ.
ಅನಿಶಾ ಅವರು ಮೂರನೇ ಹೆರಿಗೆಯಾದ ನಂತರದ ದಿನದಿಂದ ಯಾವುದೇ ಕಾರಣಕ್ಕೆ ನೊಂದುಕೊಂಡಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ (ಜೂ.೨೮ರಂದು) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಅನಿಶಾ ಅವರ ತಮ್ಮ ನೀಡಿದ ಹೇಳಿಕೆಯ ಪ್ರಕಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.