main logo

ಟೆರೆಸ್‌ ಮೇಲಿನಿಂದ ಬಿದ್ದು ಬಾಲಕ ಸಾವು

ಟೆರೆಸ್‌ ಮೇಲಿನಿಂದ ಬಿದ್ದು ಬಾಲಕ ಸಾವು

ಉಡುಪಿ: ಟೆರಸ್ ಮೇಲಿನ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ 80 ಬಡಗುಬೆಟ್ಟು ಗ್ರಾಮದ ದಶರಥ ನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಧಾರವಾಡ ಮೂಲದ ನಾಮದೇವ ಜಾಧವ್ ಎಂಬವರ ಮಗ ಆಯುಷ್(8) ಎಂದು ಗುರುತಿಸಲಾಗಿದೆ.

ಬಾಲಕ್ ಆಯುಷ್ ಗೆ ನಾಲಿಗೆಯ ಶಸ್ತ್ರ ಚಿಕಿತ್ಸೆಗಾಗಿ ಜೂ.21ರಂದು ಮಣಿಪಾಲಕ್ಕೆ ಬಂದು ದಶರಥ ನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಜೂ.25ರಂದು ಮಧ್ಯಾಹ್ನ ವೇಳೆ ಆಯುಷ್ ಇತರ ಮಕ್ಕಳೊಂದಿಗೆ ಮನೆಯ ಟೆರಸ್ ಮೇಲೆ ಆಟ ಆಡುತ್ತಿದ್ದನು. ಆಗ ಆಯತಪ್ಪಿ ಆಕಸ್ಮಿಕವಾಗಿ ಟೆರಸ್‌ನಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಆಯುಷ್, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಜೂ.26ರಂದು ಮಧ್ಯಾಹ್ನ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!