ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಅಮೆರಿಕ ಭೇಟಿಯನ್ನು ಮುಗಿಸಿ ಇಂದು (ಜೂ.24) ರಂದು ಈಜಿಪ್ಟ್‌ಗೆ ತೆರಳಿದರು. ಈಜಿಪ್ಟ್‌ಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಈಜಿಪ್ಟ್‌ಗೆ ಎರಡು ದಿನಗಳ ರಾಜ್ಯ ಭೇಟಿ ನೀಡಿದ್ದಾರೆ. ಅಲ್ಲದೇ ಇದು 1997 ರ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಈಜಿಪ್ಟ್ ಪ್ರವಾಸದ ವೇಳೆ ಪ್ರಧಾನಿ ಮೋದಿ, ಈಜಿಪ್ಟ್ ಸರ್ಕಾರದ ಹಿರಿಯ ಗಣ್ಯರು, ಪ್ರಮುಖ ವ್ಯಕ್ತಿಗಳು ಮತ್ತು ಭಾರತೀಯ ಸಮುದಾಯದ ಜೊತೆಗೆ ಅಧ್ಯಕ್ಷ ಸಿಸಿ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ. ಜನವರಿಯಲ್ಲಿ ಅಧ್ಯಕ್ಷ ಎಲ್- ಸಿಸಿ ಅವರ ರಾಜ್ಯ ಭೇಟಿಯ ಸಮಯದಲ್ಲಿ, ಎರಡೂ ದೇಶಗಳು ತಮ್ಮ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ಒಪ್ಪಿಕೊಂಡವು.