ಲಂಡನ್: ಲಂಡನ್ನಲ್ಲಿ ಭಾರತೀಯರ ಹತ್ಯಾ ಸರಣಿ ಮುಂದುವರಿದಿದ್ದು, ದಕ್ಷಿಣ ಲಂಡನ್ನಲ್ಲಿ ಕೇರಳ ಮೂಲದ 38 ವರ್ಷದ ಭಾರತೀಯ ಮೂಲದ ವ್ಯಕ್ತಿಯನ್ನುಇರಿದು ಕೊಲ್ಲಲಾಗಿದೆ. ಕೇರಳ ಮೂಲದ ಶಶಿಕುಮಾರ್ ಶುಕ್ರವಾರ ಸೌತಾಂಪ್ಟನ್ ವೇನಲ್ಲಿರುವ ತಮ್ಮ ಮನೆಯ ಹೊರಗೆ ಇದ್ದಾಗ ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ. ಶಶಿಕುಮಾರ್ ನ ರೂಮೇಟ್ ಸಲ್ಮಾನ್ ಸಲೀಂ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 20 ರಂದು ಕಸ್ಟಡಿಗೆ ನೀಡಲಾಗಿದೆ. ಜೂನ್ 13 ರಂದು ಬ್ರಿಟಿಷ್ ಭಾರತೀಯ ಮೂಲದ ಯುವತಿ ಗ್ರೇಸ್ ಒ’ಮಲ್ಲಿ ಕುಮಾರ್, ಜೂ.12ರಂದು ಹೈದರಾಬಾದ್ ಮೂಲದ 27 ವರ್ಷದ ಕೊಂಥಮ್ ತೇಜಸ್ವಿನಿ ರೆಡ್ಡಿ ಹತ್ಯೆ ಮಾಡಲಾಗಿತ್ತು.