ನವದೆಹಲಿ: ಆಧಾರ್ ನಂಬರ್ ಮತ್ತು ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಲು 2022 ಜೂನ್ 30ವರೆಗೂ 500 ರೂ ದಂಡ ಪಾವತಿಯೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. ಈ ಡೆಡ್ಲೈನ್ ತಪ್ಪಿಸಿಕೊಂಡರೆ ಕೆಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈಗ ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸುವವರು 1,000 ರೂ ಪಾವತಿಸಬೇಕಾಗಿಲ್ಲ. 2017 ಜುಲೈ 1ಕ್ಕೆ ಮುನ್ನ, ಅಂದರೆ 2023 ಜೂನ್ 30ರವರೆಗೆ ಯಾರಿಗೆಲ್ಲ ಪ್ಯಾನ್ ಕಾರ್ಡ್ ನೀಡಲಾಗಿತ್ತೋ, ಅಂಥವರು ತಮ್ಮ ಆಧಾರ್ ನಂಬರ್ಗೆ ಅದನ್ನು ಲಿಂಕ್ ಮಾಡದಿದ್ದಲ್ಲಿ ಆ ಪ್ಯಾನ್ ನಂಬರ್ಗಳು 2023 ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳುತ್ತವೆ. ಈಗ ಪ್ಯಾನ್ ಕಾರ್ಡ್ ಮಾಡಿಸಬೇಕೆಂದವರೂ ಕೂಡ ಆಧಾರ್ ದಾಖಲೆ ಮೂಲಕವೇ ಮಾಡಿಸಬೇಕು. ಹೀಗಾಗಿ, ಆಟೊಮ್ಯಾಟಿಕ್ ಆಗಿ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರುತ್ತದೆ. ಆದರೆ, ಸಮಸ್ಯೆ ಇರುವುದು 2017 ಜುಲೈ 1ಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದ್ದವರಿಗೆ ಮಾತ್ರ.
2017ರ ಜುಲೈ 1ಕ್ಕೆ ಮುಂಚೆ ಪ್ಯಾನ್ ಕಾರ್ಡ್ ಮಾಡಿಸಿದ್ದವರು ಹಾಗೂ ಅದನ್ನು ಆಧಾರ್ಗೆ ಲಿಂಕ್ ಮಾಡಿಲ್ಲದೇ ಇರುವವರು, ಅದನ್ನು ಎಲ್ಲಿಯೂ ಉಪಯೋಗಿಸದೇ ಇದ್ದಲ್ಲಿ, ಅದರ ಬದಲಿಗೆ ಹೊಸ ಪ್ಯಾನ್ ನಂಬರ್ ಪಡೆಯಬಹುದು. ಆದರೆ, ಹಳೆಯ ನಂಬರ್ ಅನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದುವಂತಿಲ್ಲ. ಹಾಗೆಯೇ, 80 ವರ್ಷ ದಾಟಿದ ವೃದ್ಧರು ಪ್ಯಾನ್ ನಂಬರ್ ಅನ್ನು ಆಧಾರ್ ಜೊತೆ ಜೋಡಿಸುವ ಅವಶ್ಯಕತೆ ಇಲ್ಲ. ಇವರಿಗೆ ಐಟಿ ಇಲಾಖೆ ವಿನಾಯಿತಿ ನೀಡಿದೆ.
2023 ಜೂನ್ 30ರೊಳಗೆ ಆಧಾರ್ ನಂಬರ್ಗೆ ಲಿಂಕ್ ಆಗದ ಪ್ಯಾನ್ ನಂಬರ್ಗಳು ನಿಷ್ಕ್ರಿಯಗೊಳ್ಳುತ್ತವೆ. ತೆರಿಗೆ ಪಾವತಿದಾರರಿಗೆ ಇದು ಬಹಳ ಮುಖ್ಯ. ನೀವು ಐಟಿ ಫೈಲಿಂಗ್ ಮಾಡಬಹುದಾದರೂ ರೀಫಂಡ್ ದಕ್ಕುವುದಿಲ್ಲ. ಪ್ಯಾನ್ ನಂಬರ್ ನಿಷ್ಕ್ರಿಯಗೊಂಡಿರುವ ಅವಧಿಯಲ್ಲಿ ನಿಮ್ಮ ರೀಫಂಡ್ ಹಣಕ್ಕೆ ಬಡ್ಡಿಯೂ ಜಮೆ ಆಗುವುದಿಲ್ಲ. ಅಷ್ಟೇ ಅಲ್ಲ, ನಿಷ್ಕ್ರಿಯ ಪ್ಯಾನ್ ಕಾರ್ಡ್ ಹೊಂದಿರುವವರ ವಹಿವಾಟಿಗೆ ಹೆಚ್ಚು ಮೊತ್ತದ ಟಿಡಿಎಸ್ ಮತ್ತು ಟಿಸಿಎಸ್ ಡಿಡಕ್ಟ್ ಆಗುತ್ತದೆ.
ಅಕಸ್ಮಾತ್ ನೀವು ಡೆಡ್ಲೈನ್ ಮುಗಿದುಹೋಯಿತು ಎಂದರೆ ತೀರಾ ಭಯಪಡಬೇಕಿಲ್ಲ. ನೀವು ಐಟಿ ಇಲಾಖೆ ಅನುಮತಿ ಮೇರೆಗೆ ಪ್ಯಾನ್ ಕಾರ್ಡ್ ಅನ್ನು ಮತ್ತೊಮ್ಮೆ ಸಕ್ರಿಯಗೊಳಿಸಲು ಸಾಧ್ಯ. ಅದಕ್ಕೆ ನಿರ್ದಿಷ್ಟ ದಂಡ ಕಟ್ಟಬೇಕಾಗುತ್ತದೆ.