ಮಂಗಳೂರು: ರೋಗಿಗೆ ಸಹಾಯ ಮಾಡುವ ನೆಪದಲ್ಲಿ ಆಸ್ಪತ್ರೆಯಲ್ಲೇ ಅತ್ಯಾಚಾರ ಮಾಡಿ ಪ್ರಕರಣ ನಡೆದಿದ್ದು ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ಹೊಸದುರ್ಗ ಪುಲ್ಲೂರು ಗ್ರಾಮದ ನಿವಾಸಿ ಸುಜಿತ್ ಬಂಧಿತ ಆರೋಪಿ. ಪಿಸ್ತೂಲದಿಂದ ಬಳಲುತ್ತಿದ್ದ ಕಾಸರಗೋಡು ಮೂಲದ ಮಹಿಳೆ ಚಿಕಿತ್ಸೆ ಪಡೆಯಲೆಂದು ಮಾ.೧೩ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆರೋಪಿ ಸುಜಿತ್ನೊಂದಿಗೆ ಬಂದಿದ್ದರು. ಮಾ.೧೬ರಂದು ರಾತ್ರಿ ೮ಗಂಟೆಗೆ ಆಸ್ಪತ್ರೆಗೆ ಬಂದಿದ್ದ ಸುಜಿತ್ ಬಲವಂತವಾಗಿ ಮಹಿಳೆಯ ಬಟ್ಟೆಗಳನ್ನು ತೆಗೆದು ಅತ್ಯಾಚಾರ ಮಾಡಿ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಏಪ್ರಿಲ್ ೪ರಂದು ಈ ನಗ್ನ ಫೋಟೋಗಳನ್ನು ಆಕೆಗೆ ತೋರಿಸಿದ ಸುಜಿತ್ ಮತ್ತೆ ಮಂಗಳೂರಿಗೆ ಬರುವಂತೆ ಒತ್ತಾಯವಾಗಿ ಕರೆದುಕೊಂಡು ಬಂದಿದ್ದು ಏಪ್ರಿಲ್ ೪ರಿಂದ ೮ರವರೆಗೆ ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೋಣೆ ಬುಕ್ ಮಾಡಿದ್ದು ಅಲ್ಲಿಯೂ ಹೆದರಿಸಿ, ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವೇಳೆಯೂ ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ದ. ಮಹಿಳೆ ಏಪ್ರಿಲ್ ೮ರಿಂದ ಮೇ.೧೦ರವರಿಗೆ ಮತ್ತೊಂದು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೂ ಬಂದಿದ್ದ ಆರೋಪಿ, ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಈ ವಿಚಾರ ಬಹಿರಂಗಪಡಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.