main logo

ಸ್ಫೋಟ ಪ್ರಕರಣ ನಂತರ ಸುದ್ದಿಯಲ್ಲಿರುವ ರಾಮೇಶ್ವರಂ ಕೆಫೆ ದಿನದ ಆದಾಯ ಎಷ್ಟು ಗೊತ್ತಾ

ಸ್ಫೋಟ ಪ್ರಕರಣ ನಂತರ ಸುದ್ದಿಯಲ್ಲಿರುವ ರಾಮೇಶ್ವರಂ ಕೆಫೆ ದಿನದ ಆದಾಯ ಎಷ್ಟು ಗೊತ್ತಾ

ತಿಂಗಳಿಗೆ 4.5 ಕೋಟಿ ರೂ. ಆದಾಯ ಗಳಿಸುವ ಈ ಉದ್ಯಮ ಆರಂಭಿಸಿದ್ದು ಇವರೇ ನೋಡಿ
ಸಿಎ ಆಗಿದ್ದವರು ಸರಣಿ ಹೋಟೆಲ್‌ ಗಳ ಮಾಲೀಕರಾದ ಬಗೆ ಹೇಗೆ

ಬೆಂಗಳೂರಿನ ಹೆಚ್‌ಎಎಲ್‌ ಬಳಿಯ ರಾಮೇಶ್ವರಂ ಕೆಫೆಯು ತಿಂಗಳಿಗೆ ₹4.5 ಕೋಟಿ, ವಾರ್ಷಿಕವಾಗಿ ₹50 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದು ಹೇಗೆ ಹಾಗೂ ಇಷ್ಟು ದೊಡ್ಡ ಮಟ್ಟದ ಆದಾಯ ಗಳಿಸುವ ಮಟ್ಟಕ್ಕೆ ಬೆಳೆಯಲು ಹೇಗೆ ಸಾಧ್ಯ ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆಯನ್ನು ಇಂಟರ್ನೆಟ್ ಬಳಕೆದಾರರು ಹೇಗೆ ಪ್ರಾರಂಭಿಸಿದರು ಮತ್ತು ಅದರ ಖ್ಯಾತಿಯ ಪ್ರಯಾಣದ ವಿವರಗಳನ್ನು ಹಂಚಿಕೊಂಡ ನಂತರ ಮತ್ತೆ ಸುದ್ದಿಯಲ್ಲಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಜಾಲತಾಣ ಬಳಕೆದಾರರ ಕಣ್ಣಿಗೆ ಬಿದ್ದದ್ದು ಅದರ ಮಾಸಿಕ ಗಳಿಕೆ!

ಈ ರೆಸ್ಟೋರೆಂಟ್ ತಿಂಗಳಿಗೆ ₹4.5 ಕೋಟಿ, ವಾರ್ಷಿಕವಾಗಿ ₹50 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುತ್ತದೆ. ಬೆಂಗಳೂರಿನ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಹಾರವನ್ನು “ರಾಮೇಶ್ವರಂ ಕೆಫೆ” ನೀಡುತ್ತದೆ. ಇನ್ನು ಇದನ್ನು ಪ್ರಾರಂಭಿಸಿದ ಸಿಎ ಮತ್ತು ಫುಟ್ ಕಾರ್ಟ್ ಮಾಲೀಕರ ಬಗ್ಗೆ ಇಲ್ಲಿ ತಿಳಿಯಿರಿ. ಈ ರಾಮೇಶ್ವರಂ ಕೆಫೆಯು ಪ್ರತಿ ತಿಂಗಳು ₹4.5 ಕೋಟಿ ಆದಾಯ ಗಳಿಸುತ್ತಿದೆ ಎಂದು ಬಳಕೆದಾರ, ಸೇಜಲ್ ಸುದ್ ಎನ್ನುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ರೆಸ್ಟೋರೆಂಟ್‌ ತುಪ್ಪದ ಪೋಡಿ ಇಡ್ಲಿ ಮತ್ತು ಮಸಾಲೆ ದೋಸೆ ಸೇರಿದಂತೆ ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರಕ್ಕಾಗಿ ಹೆಸರುವಾಸಿಯಾಗಿದೆ. ಇದರ ಸಂಸ್ಥಾಪಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್ ಅವರು ಪರಸ್ಪರ ಸ್ನೇಹಿತರ ಮೂಲಕ ಭೇಟಿಯಾಗಿ 2021ರಲ್ಲಿ ಇಂದಿರಾನಗರದಲ್ಲಿ ರೆಸ್ಟೋರೆಂಟ್‌ನ ಮೊದಲ ಶಾಖೆಯನ್ನು ಪ್ರಾರಂಭಿಸಿದರು.

ದಿವ್ಯಾ ಅವರು ಐಐಎಂ ಅಹಮದಾಬಾದ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಸಿಎ ಆಗಿದ್ದರು. ಇನ್ನು ರಾಘವೇಂದ್ರ ಅವರು ಶೇಷಾದ್ರಿಪುರಂನಲ್ಲಿ ಆಹಾರ ಕಾರ್ಟ್‌ನಿಂದ ದೋಸೆ ಮತ್ತು ಇಡ್ಲಿಗಳನ್ನು ಬಡಿಸುತ್ತಾ 15 ವರ್ಷಗಳಿಂದ ಆಹಾರ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಈ ರೆಸ್ಟೋರೆಂಟ್‌ನ ಪ್ರಾರಂಭ ಮತ್ತು ವಿಸ್ತರಣೆಯ ಕುರಿತು ಈ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇವರು ಉತ್ತಮ ಆಹಾರಗಳನ್ನು ನೀಡುವ ಮೂಲಕ ಜನರ ಹೃದಯಗಳನ್ನು ಗೆದ್ದಿದ್ದಾರೆ. ಅಲ್ಲದೆ, 200ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!