main logo

ಮದುವೆಯಾಗಿ 2 ವರ್ಷವಾದರೂ ಸರಸವಾಡದ ಗಂಡ; ಪತ್ನಿ ಕಾದು ಕೆಂಡ; ಈಗ ಪೊಲೀಸರ ದಂಡ

ಮದುವೆಯಾಗಿ 2 ವರ್ಷವಾದರೂ ಸರಸವಾಡದ ಗಂಡ; ಪತ್ನಿ ಕಾದು ಕೆಂಡ; ಈಗ ಪೊಲೀಸರ ದಂಡ

ಮುಜಾಫರ್‌ಪುರ: ಮದುವೆಯಾಗಿ ಎರಡು ವರ್ಷವಾದರೂ ಇನ್ನೂ ತನ್ನ ಮೈ ಮುಟ್ಟದ, ಸರಸವಾಡದ ಪತಿಯ (Husband) ಬಗ್ಗೆ ಕೋಪಿಸಿಕೊಂಡಿರುವ ಪತ್ನಿ (Wife) ಇದೀಗ ಆತನಿಂದ ವಿಚ್ಛೇದನ (Divorce) ಕೋರಿದ್ದಾಳೆ. ಈ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.

ಮದುವೆಯಾಗಿ ಸಾಕಷ್ಟು ಕಾಲವಾಗಿದ್ದರೂ ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆ ಠಾಣೆಯ ಮೆಟ್ಟಿಲೇರಿ ಎಫ್ಐಆರ್ ದಾಖಲಿಸಿದ್ದಲ್ಲದೆ, ತನ್ನ ಗಂಡನೂ ಸೇರಿದಂತೆ ಒಟ್ಟು 6 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾಳೆ.

ಸಂತ್ರಸ್ತೆ ವೈಶಾಲಿ ಜಿಲ್ಲೆಯ ಲಾಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದವಳು. 2021ರ ಮೇ 31ರಂದು ಮದುವೆಯಾದೆ. ಬಳಿಕ ನನ್ನ ಗಂಡನ ಮನೆಗೆ ಹೋದೆ. ಮದುವೆಯಾದ ಬಳಿಕ ಎರಡು ವರ್ಷದಿಂದ ಗಂಡ ನನ್ನೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಇಟ್ಟುಕೊಂಡಿಲ್ಲ. ಈ ವಿಚಾರವನ್ನು ನನ್ನ ಅತ್ತೆ -ಮಾವರಿಗೂ ತಿಳಿಸಿದೆ. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ನಾನು ನನ್ನ ಪತಿಯನ್ನು ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ದೌರ್ಜನ್ಯ ನಡೆಸಲಾಯಿತು. ನಾನು ತವರು ಮನೆಗೆ ಹಿಂತಿರುಗಲು ನಿರ್ಧರಿಸಿದಾಗ, ನನಗೆ ಕೊಲೆ ಬೆದರಿಕೆ ಸಹ ಹಾಕಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಸಾಕಷ್ಟು ಬಾರಿ ಆಪ್ತ ಸಮಾಲೋಚನೆ ನಡೆಸಿದರೂ ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಕೊನೆಯ ಆಯ್ಕೆ ಎಂಬಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲರ ಹೇಳಿಕೆಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 498ಎ, 379, 504, 506, 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಮದುವೆಯನ್ನು ರದ್ದು ಮಾಡಿ, ವೈಶಾಲಿ ಜಿಲ್ಲೆಯಲ್ಲಿರುವ ನನ್ನ ಪಾಲಕರ ಮನೆಗೆ ಮರಳಲು ಬಯಸಿದ್ದೇನೆ. ಆದರೆ, ಗಂಡನ ಮನೆ ಬಿಟ್ಟು ಬಂದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಗಳಿಗೆ ನಾನು ಆತಂಕಗೊಂಡಿದ್ದೇನೆ. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬಹುದಾದ ಮತ್ತು ಪರಿಹಾರವನ್ನು ಕಂಡುಕೊಳ್ಳುವ ಯಾವುದೇ ಸಣ್ಣ ಪ್ರಯತ್ನವನ್ನು ಸಹ ನಾನು ಬಿಟ್ಟಿಲ್ಲ. ಆದರೆ ಯಾವುದು ಕೂಡಾ ಪ್ರಯೋಜನಕ್ಕೆ ಬಂದಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾಳೆ.

ನನ್ನ ಸಹನೆಯನ್ನು ಮೀರಿದ ನಿಂದನೆ ಮತ್ತು ದೌರ್ಜನ್ಯದಿಂದ ಬಳಲುತ್ತಿದ್ದೇನೆ. 2021ರಲ್ಲಿ ಮದುವೆಯಾದಾಗಿನಿಂದ ಬಲೆಗೆ ಸಿಲುಕಿದ ಮೀನಿನಂತಾಗಿದೆ ನನ್ನ ಪರಿಸ್ಥಿತಿ ಎಂದಿರುವ ಸಂತ್ರಸ್ತೆ ಈ ಸಂಕಷ್ಟದ ಸ್ಥಿತಿಯಿಂದ ಪಾರಾಗಲು ಪೊಲೀಸರ ಸಹಾಯವನ್ನು ಕೋರಿದ್ದಾಳೆ.

Related Articles

Leave a Reply

Your email address will not be published. Required fields are marked *

error: Content is protected !!