main logo

ಸಲ್ಲೇಖನ ವ್ರತ ಮೂಲಕ ದೇಹ ತ್ಯಜಿಸಿದ ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್

ಸಲ್ಲೇಖನ ವ್ರತ ಮೂಲಕ ದೇಹ ತ್ಯಜಿಸಿದ ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್

ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್(Acharya Vidyasagar Maharaj) ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಛತ್ತೀಸ್‌ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅವರು ಕೊನೆಯುಸಿರೆಳೆದರು. ಅವರ ಅಂತಿಮ ಸಂಸ್ಕಾರವನ್ನು ಇಂದು ಫೆಬ್ರವರಿ 18 ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು. ಕಳೆದ ಕೆಲವು ದಿನಗಳಿಂದ ಆಚಾರ್ಯಶ್ರೀ ಅವರು ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.

ಆಚಾರ್ಯಶ್ರೀಗಳು ಕೊನೆಯ ಉಸಿರಿನವರೆಗೂ ಜಾಗೃತ ಸ್ಥಿತಿಯಲ್ಲಿದ್ದು ಮಂತ್ರಗಳನ್ನು ಪಠಿಸುತ್ತಲೇ ಇಹಲೋಕ ತ್ಯಜಿಸಿದರು. ಸಮಾಧಿಯ ಸಮಯದಲ್ಲಿ, ಪೂಜ್ಯ ಮುನಿಶ್ರೀ ಯೋಗಸಾಗರ ಜಿ ಮಹಾರಾಜ್, ಶ್ರೀ ಸಮತಾಸಾಗರ ಜಿ ಮಹಾರಾಜ್, ಶ್ರೀ ಪ್ರಸಾದಸಾಗರ್ ಜಿ ಮಹಾರಾಜ್ ಮತ್ತು ಸಂಘದವರು ಅವರೊಂದಿಗೆ ಉಪಸ್ಥಿತರಿದ್ದರು. ದೇಶಾದ್ಯಂತ ಜೈನ ಸಮುದಾಯ ಮತ್ತು ಆಚಾರ್ಯಶ್ರೀ ಅವರ ಭಕ್ತರು ಅವರ ಗೌರವಾರ್ಥ ಇಂದು ತಮ್ಮ ಸಂಸ್ಥೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲು ನಿರ್ಧರಿಸಿದ್ದಾರೆ.

ಮಾಹಿತಿ ಸಿಕ್ಕ ತಕ್ಷಣ ಆಚಾರ್ಯಶ್ರೀಗಳ ಸಾವಿರಾರು ಶಿಷ್ಯರು ಡೊಂಗರಗಢಕ್ಕೆ ತೆರಳಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢದ ರಾಜನಂದಗಾಂವ್‌ನ ಡೊಂಗರ್‌ಗಢ್‌ನಲ್ಲಿರುವ ಜೈನ ಯಾತ್ರಾಸ್ಥಳ ಚಂದ್ರಗಿರಿಗೆ ಭೇಟಿ ನೀಡಿ ಜೈನ ಸಂತ ವಿದ್ಯಾಸಾಗರ ಮಹಾರಾಜರ ದರ್ಶನ ಪಡೆದಿದ್ದರು.

ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ 10 ಅಕ್ಟೋಬರ್ 1946 ರಂದು ಜನಿಸಿದರು. ಅವರು 30 ಜೂನ್ 1968 ರಂದು ರಾಜಸ್ಥಾನದ ಅಜ್ಮೀರ್ ನಗರದಲ್ಲಿ ತಮ್ಮ ಗುರು ಆಚಾರ್ಯಶ್ರೀ ಜ್ಞಾನಸಾಗರ್ ಜಿ ಮಹಾರಾಜ್ ಅವರಿಂದ ಮುನಿದೀಕ್ಷೆಯನ್ನು ಪಡೆದರು. ಅವರ ಕಠಿಣ ತಪಸ್ಸನ್ನು ಕಂಡು ಆಚಾರ್ಯಶ್ರೀ ಜ್ಞಾನಸಾಗರ್ ಜಿ ಮಹಾರಾಜ್ ಅವರಿಗೆ ಆಚಾರ್ಯ ಹುದ್ದೆಯನ್ನು ನೀಡಿದ್ದರು.

ಆಚಾರ್ಯ ಶ್ರೀಯವರು 1975ರ ಸುಮಾರಿಗೆ ಬುಂದೇಲಖಂಡಕ್ಕೆ ಬಂದರು. ಬುಂದೇಲ್‌ಖಂಡ್‌ನ ಜೈನ ಸಮುದಾಯದ ಭಕ್ತಿ ಮತ್ತು ಸಮರ್ಪಣೆಯಿಂದ ಅವರು ಪ್ರಭಾವಿತರಾಗಿದ್ದರು, ಅವರು ತಮ್ಮ ಹೆಚ್ಚಿನ ಸಮಯವನ್ನು ಬುಂದೇಲ್‌ಖಂಡದಲ್ಲಿ ಕಳೆದರು. ಆಚಾರ್ಯಶ್ರೀಗಳು ಸುಮಾರು 350 ದೀಕ್ಷೆಗಳನ್ನು ನೀಡಿದ್ದಾರೆ. ಅವರ ಶಿಷ್ಯರು ದೇಶಾದ್ಯಂತ ಸಂಚರಿಸಿ ಜೈನ ಧರ್ಮ ಪ್ರಚಾರ ಮಾಡುತ್ತಿದ್ದಾರೆ. ಮುನಿಗಳು ಹಿಂದಿ, ಮರಾಠಿ ಮತ್ತು ಕನ್ನಡದಲ್ಲಿ ಪರಿಣಿತರಾಗಿದ್ದರು, ಹಿಂದಿ ಹಾಗೂ ಸಂಸ್ಕೃತದಲ್ಲಿ ಸಾಕಷ್ಟು ಲೇಖನ ಬರೆದಿದ್ದಾರೆ.

ರಾಜಕೀಯ ನಾಯಕರುಗಳಾದ, ದಿಗ್ವಿಜಯ ಸಿಂಗ್, ಶಿವರಾಜ್​ ಸಿಂಗ್ ಚೌಹಾಣ್, ಬಿಜೆಪಿ ನಾಯಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!