ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಎಫ್ಎಸ್‌ಎಲ್ ವರದಿ ಪೊಲೀಸರ ಕೈಸೇರಿದ್ದು, ವಾರದೊಳಗೆ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಸಂಭವವಿದೆ.
ಪ್ರಕರಣಕ್ಕೆ ಸಂಬಂಧಿಸಿ ಸರಕಾರದ ಪರ ವಾದಿಸಲು ರಾಜ್ಯ ಸರಕಾರವು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ಮಂಗಳೂರಿನ ನ್ಯಾಯವಾದಿ ಶಿವಪ್ರಸಾದ್ ಆಳ್ವ ಅವರನ್ನು ನೇಮಕ ಮಾಡಿದ್ದಾರೆ.
ಫೆ. 12ಕ್ಕೆ ಘಟನೆ ನಡೆದು 90 ದಿನ ಕೊಲೆ ಪ್ರಕರಣ ನ. 12ರಂದು ನಡೆದಿದ್ದು, ಫೆ. 12ಕ್ಕೆ 90 ದಿನಗಳು ಪೂರ್ಣಗೊಳ್ಳಲಿದೆ. ಸದ್ಯ ಜಾರ್ಜ್‌ಶೀಟ್ ಸಲ್ಲಿಕೆ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.