main logo

19 ವರ್ಷದ ನಂತರ ಒಂದಾದ ಟ್ವಿನ್ಸ್

19 ವರ್ಷದ ನಂತರ ಒಂದಾದ ಟ್ವಿನ್ಸ್

ಅಟ್ಲಾಂಟ: ಹುಟ್ಟಿನಿಂದ ಬೇರ್ಪಟ್ಟು ಒಂದೇ ನಗರದಲ್ಲಿ ವಾಸವಿದ್ದ ಅವಳಿಗಳು 19 ವರ್ಷದ ನಂತರ ಒಂದಾಗಿರುವ ಘಟನೆ ಪೂರ್ವ ಯುರೋಪಿಯನ್ ದೇಶ ಜಾರ್ಜಿಯಾದಲ್ಲಿ ನಡೆದಿದೆ.

ಆಮಿ ಖ್ವಿಟಿಯಾ ಮತ್ತು ಅನೋ ಸರ್ತಾನಿಯಾ ಬೇರ್ಪಟ್ಟಿದ್ದ ಅವಳಿ ಸಹೋದರಿಯರು. ಅವಳಿ ಮಕ್ಕಳ ತಾಯಿಯಾದ ಅಜಾ ಶೋನಿ ಅವರು 2002 ರಲ್ಲಿ ಆಮಿ ಮತ್ತು ಅನೋ ಎಂಬ ಅವಳಿ ಹೆಣ್ಣುಮಕ್ಕಳಿಗೆ ಜಾರ್ಜಿಯಾ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಅದರೆ ಅವರು ಮಕ್ಕಳ ಜನ್ಮ ತೂಡಕುಗಳಿಂದ ಕೋಮಾಗೆ ಜಾರಿದ್ದಾರೆ. ಆಕೆಯ ಗಂಡನಾದ ಗೋಚಾ ಗಖಾರಿಯಾ ಅವಳಿ ಹೆಣ್ಣುಮಕ್ಕಳನ್ನು ಆ ಪ್ರತ್ಯೇಕ ಕುಟುಂಬಗಳಿಗೆ ಮಾರಾಟ ಮಾಡಿ ಬೇರ್ಪಡಿಸಿದ್ದ. ಆದರೆ ಅವರು ಒಂದೇ ನಗರದಲ್ಲಿ ಸುಮಾರು 19 ವರ್ಷಗಳ ಕಾಲ ವಾಸವಿದ್ದರು.

ಅನೋಳನ್ನು ಟಿಬಿಲಿಸಿ ಎಂಬವರು ಪೋಷಣೆ ಮಾಡುತ್ತಿದ್ದರು. ಆದರೆ ಅನೋಳಿಗೆ ಅವಳಿ ಸಹೋದರಿ ಇದ್ದಾಳೆ ಎಂಬುದರ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಅಥವಾ ಸುಳಿವು ಇರಲಿಲ್ಲ. ಒಂದು ದಿನ ಆಮಿಯ ಅಚ್ಚುಮೆಚ್ಚಿನ ಟಿವಿ ಶೋ ಆದ “ಜಾರ್ಜಿಯಾಸ್ ಗಾಟ್ ಟ್ಯಾಲೆಂಟ್” ಅನ್ನು ವೀಕ್ಷಿಸುವಾಗ ಮಗಳ ಹೋಲಿಕೆ ಹೊಂದಿರುವ ಹುಡುಗಿಯೊಬ್ಬಳು ನೃತ್ಯ ಮಾಡುವುದನ್ನು ನೋಡಿ ಆಶ್ಚರ್ಯವಾಗಿದ್ದಾರೆ. ಅಂದು ಅವರಿಗೆ ಆಕೆ ಅನೋಳ ಸಹೋದರಿ ಎಂಬುದು ತಿಳಿದಿರಲಿಲ್ಲ. ನಂತರ ಅವರು ವೈರಲ್ ಟಿಕ್‌ಟಾಕ್ ಮತ್ತು ಟ್ಯಾಲೆಂಟ್ ಶೋ ಮೂಲಕ ಪರಿಚಯವಾಗಿ, ಇಬ್ಬರೂ ಅವಳಿ ಸಹೋದರಿಯರು 19 ವರ್ಷದ ಬಳಿಕ ಒಂದಾಗಿದ್ದಾರೆ.

ಈ ಪ್ರಕರಣದೊಂದಿಗೆ ಅಚ್ಚರಿದಾಯಕ ಅಂಶವೊಂದು ಬಹಿರಂಗಗೊಂಡಿದೆ. ಜಾರ್ಜಿಯನ್ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಮಕ್ಕಳನ್ನು ಕದ್ದು ಮಾರಾಟ ಮಾಡಲಾಗುತ್ತಿದೆ. ಈವರೆಗೂ ಮಾರಾಟವಾದ ಸಾವಿರಾರು ಶಿಶುಗಳಲ್ಲಿ ಇವರೂ ಸೇರಿದ್ದಾರೆ. ಇತ್ತೀಚೆಗೆ ಕೂಡ ಜಾರ್ಜಿಯಾದಲ್ಲಿ ಇದೇ ರೀತಿ ಪ್ರಕರಣಗಳು ದಾಖಲಾಗಿವೆ. ಜಾರ್ಜಿಯಾದಿಂದ ಕದ್ದು ಮಾರಾಟವಾದ ಮಕ್ಕಳ ಸಂಖ್ಯೆಯ ಸಮಸ್ಯೆ ಬಗೆಹರಿಯದೆ ಹಲವು ದಶಕಗಳಿಂದ ಹಾಗೆ ಉಳಿದಿದೆ. ಇಂದಿಗೂ ಕೂಡ ಜಾರ್ಜಿಯಾವನ್ನು ಈ ಸಮಸ್ಯೆ ಬಾಧಿಸುತ್ತಿದೆ. ಈ ಸಮಸ್ಯೆ ಮೇಲೆ ಅವಳಿ ಸಹೋದರಿಯರ ಘಟನೆ ಬೆಳಕು ಚೆಲ್ಲುತ್ತದೆ. ಜಾರ್ಜಿಯಾದ ಆಸ್ಪತ್ರೆಗಳಲ್ಲಿ ಎಷ್ಟು ಮಕ್ಕಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿಲ್ಲ

Related Articles

Leave a Reply

Your email address will not be published. Required fields are marked *

error: Content is protected !!