ನವದೆಹಲಿ: ಅಫಘಾನಿಸ್ತಾನದಲ್ಲಿ ಪತನವಾಗಿರುವುದು ಮೊರೊಕನ್-ನೋಂದಾಯಿತ DC-10 ವಿಮಾನವಾಗಿದ್ದು, ಕುರಾನ್-ಮುಂಜಾನ್ ಜಿಲ್ಲೆ ಮತ್ತು ಬಡಾಕ್ಷನ್ ಪ್ರಾಂತ್ಯದ ಝಿಬಾಕ್ ಟೋಪ್ಖಾನಾದ ಪರ್ವತಗಳಲ್ಲಿ ಪತನಗೊಂಡಿದೆ ಎಂದು ಮೂಲಗಳು ಹೇಳಿವೆ. ಉತ್ತರ ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ವಿಮಾನವೊಂದು ಪತನಗೊಂಡಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ದೂರದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅದೇ ರೀತಿ ಅಫ್ಘಾನಿಸ್ತಾನದ ಪರ್ವತಗಳಲ್ಲಿ ಅಪಘಾತಕ್ಕೀಡಾದ ವಿಮಾನವು ಭಾರತೀಯ ವಿಮಾನವಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
The unfortunate plane crash that has just occurred in Afghanistan is neither an Indian Scheduled Aircraft nor a Non Scheduled (NSOP)/Charter aircraft. It is a Moroccan registered small aircraft. More details are awaited.
— MoCA_GoI (@MoCA_GoI) January 21, 2024