ಅಳಿವಿನ ಅಂಚಿನಲ್ಲಿರುವ ವಿಶೇಷ ರೀತಿಯ ಹಾಗೂ ವಿಶಿಷ್ಟ ಬದುಕಿನ ‘ಆಲಿವ್ ರಿಡ್ಲೆ’ ಕಡಲಾಮೆ ಮೊಟ್ಟೆಗಳು ಮಂಗಳೂರಿನಲ್ಲೂ ಇದೀಗ ಪತ್ತೆಯಾಗಿವೆ. ಅಪರೂಪದ ಕಡಲಾಮೆಗಳು ಕಡಲತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟು ಹೋಗಿವೆ ವಿಶಿಷ್ಟ ಬದುಕಿನ ಇದುವರೆಗೆ ಈ ಆಮೆಗಳ ಮೊಟ್ಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಇದುವೆರೆಗೂ ದಾಖಲಾಗಿಲ್ಲ.
ಸುರತ್ಕಲ್ ಆಸುಪಾಸಿನ ಕಡಲತೀರದ ಮೂರು ಕಡೆಗಳಲ್ಲಿ ಆಲಿವ್ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಸಂರಕ್ಷಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಕುಂದಾಪುರದಲ್ಲಿ ಆಲಿವ್ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇರಿಸಿ ಹೋಗುವುದು ದಾಖಲಾಗುತ್ತಿತ್ತು. ಮಂಗಳೂರಿನಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.ಕೊರೋನಾ ಸಮಯದಲ್ಲಿ ಬೀಚ್ನತ್ತ ಯಾರೂ ಎಂಟ್ರಿಯಾಗದೇ ಇದ್ದದರಿಂದಲೂ ಆ ಟೈಮ್ನಲ್ಲಿ ಈ ಆಮೆಗಳು ಮೊಟ್ಟೆ ಇಟ್ಟು ಸಂತಾನೊತ್ಪತ್ತಿ ಮಾಡಿದ್ದವು.
ಇದೀಗ ಮಾನವ ಚಟುವಟಿಕೆ ಹೆಚ್ಚಿರುವ ಕಾರಣ ಎಲ್ಲೂ ಈ ಮೊಟ್ಟೆಗಳು ಕಂಡುಬರುತ್ತಿರಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಕಡಲ ತೀರದಲ್ಲಿ ಮೂರು ಕಣ್ಗಾವಲು ತಂಡ ರಚಿಸಿತ್ತು. ಆಲಿವ್ ರಿಡ್ಲೆ ಆಮೆ ನಾಚಿಕೆ ಸ್ವಭಾವ ಹಾಗೂ ನಿಧಾನವಾಗಿ ಸಂಚರಿಸುವ ಗುಣವುಳ್ಳದ್ದು. ಮಧ್ಯರಾತ್ರಿ, ಮುಂಜಾವ ತೀರಕ್ಕೆ ದೊಡ್ಡ ಅಲೆಗಳ ಸಂದರ್ಭ ಒಟ್ಟಿಗೆ ಬಂದು ಮೊಟ್ಟೆ ಇರಿಸಿ ಮರಳುತ್ತವೆ. ಅಚ್ಚರಿ ಎಂದರೆ ಮೊಟ್ಟೆ ಇರಿಸಿದ ಬಳಿಕ ಅವು ಇತ್ತ ಕಡೆ ಬರುವುದೇ ಇಲ್ಲ ಎಂದು ಹೇಳಲಾಗಿದೆ.
ಮೊಟ್ಟೆಗಳು ತಾವಾಗಿ ಒಡೆದು ಮರಿಯಾಗುತ್ತವೆ ಮತ್ತು ಮೊಟ್ಟೆ ಒಡೆದು ಮರಿಯಾಗುವುದಕ್ಕೆ ಸುಮಾರು 45 ದಿನಗಳ ಕಾಲಾವಕಾಶದ ಅಗತ್ಯವಿದೆ. ಒಂದು ಆಮೆ ಒಮ್ಮೆಗೆ 100ರಷ್ಟು ಮೊಟ್ಟೆ ಇರಿಸುತ್ತದೆ.